LATEST NEWS
ಅನುಮಾನಾಸ್ಪದ ಸಾವಿನ ತನಿಖೆಗೆ ಶಿರೂರು ಮಠವನ್ನು ಸುಪರ್ದಿಗೆ ಪಡೆದುಕೊಂಡ ಪೊಲೀಸರು
ಅನುಮಾನಾಸ್ಪದ ಸಾವಿನ ತನಿಖೆಗೆ ಶಿರೂರು ಮಠವನ್ನು ಸುಪರ್ದಿಗೆ ಪಡೆದುಕೊಂಡ ಪೊಲೀಸರು
ಉಡುಪಿ ಜುಲೈ 19: ಉಡುಪಿ ಶಿರೂರು ಮಠದ ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಸಾವಿಗೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಶಿರೂರು ಮಠವನ್ನು ಪೊಲೀಸರು ಜುಲೈ 19ರಿಂದ 21ರವರೆಗೆ ಅಂದರೆ ಇಂದಿನಿಂದ ಶನಿವಾರದವರಗೆ ಉಡುಪಿ ಪೊಲೀಸರು ಸುಪರ್ದಿಗೆ ಪಡೆದಿದ್ದಾರೆ.
ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿಗಳಿಗೆ ವಿಷ ಪ್ರಾಶನ ಮಾಡಿಸಲಾಗಿದೆ ಎಂಬುದರ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರು ಹಿರಿಯಡ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿರೂರು ಶ್ರ್ರೀಗಳ ಸಾವಿನ ಕುರಿತಂತೆ ಹಲವಾರು ಅನುಮಾನಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಶ್ರೀಗಳ ಸಾವಿಗೆ ಬೇರೆ ಕಾರಣಗಳಿದೆಯಾ? ವಿಷಪ್ರಾಶನ ಆದಂತಹ ಕೆಲವು ಸಂಶಯಗಳನ್ನು ಕೆಎಂಸಿಯ ವೈದ್ಯರು ಹೇಳಿರುತ್ತಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು. ಇದೊಂದು ಅನುಮಾನಸ್ಪದವಾದ ಸಾವಾಗಿದ್ದು, ಹೀಗಾಗಿ ಈ ಸಾವಿಗೆ ನಿಖರ ಕಾರಣವೇನೆಂದು ನಮಗೆ ಪೊಲೀಸ್ ತನಮಿಖೆಯ ಮೂಲಕ ತಿಳೀದುಬರಬೇಕು ಅಂತ ದೂರಿನಲ್ಲಿ ಲಾತವ್ಯ ಆಚಾರ್ಯ ಅವರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಾಕ್ಷ್ಯಾಧಾರ ಪರಿಶೀಲನೆಗಾಗಿ ಮೂರು ದಿನಗಳ ಕಾಲ ಮಠವನ್ನು ಸುಪರ್ಧಿಗೆ ಉಡುಪಿ ಪೊಲೀಸರು ಪಡೆದಿದ್ದಾರೆ. ಪೊಲೀಸರು ಇಂದಿನಿಂದ ಮೂರು ದಿನಗಳ ಮಠದ ಪರಿಶೀಲನೆ ನಡೆಸಲಿದ್ದಾರೆ. ತನಿಖೆಗೆ ತೊಂದರೆ ಆಗದಿರಲಿ ಎಂಬ ಸಾರ್ವಜನಿಕರಿಗೆ ಮಠದ ಪ್ರವೇಶವನ್ನು ನಿರ್ಭಂಧಿಸಲಾಗಿದೆ ಎಂದು ಎಸ್.ಪಿ. ಲಕ್ಷ್ಮಣ್ ನಿಂಬರ್ಗಿ ಮಾಹಿತಿ ನೀಡಿದ್ದಾರೆ.