LATEST NEWS
ಇಂಡೊ – ನೇಪಾಲ್ ತ್ರೋ ಬಾಲ್ ಚಾಂಪಿಯನ್ ಶಿಪ್ – ಭಾರತದ ತಂಡದಲ್ಲಿ ಉಡುಪಿಯ ಆಟಗಾರ್ತಿಯರು

ಉಡುಪಿ : ನೇಪಾಳದಲ್ಲಿ ನಡೆದ ಇಂಡೊ – ನೇಪಾಲ್ ತ್ರೋ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಭಾರತ ಗೆಲುವಿನ ಸಾಧನೆ ಮಾಡಿದ್ದು, ತಂಡದಲ್ಲಿ ಉಡುಪಿ ಜಿಲ್ಲೆಯ ಮೂವರು ಆಟಗಾರ್ತಿಯರು ಇದ್ದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ನವಂಬರ್ 12 ಮತ್ತು 13 ಕ್ಕೆ ನೇಪಾಳದಲ್ಲಿ ಐದು ರಾಜ್ಯಗಳ ತ್ರೋಬಾಲ್ ಕ್ರೀಡಾಕೂಟ ನಡೆದಿದೆ. ದೇಶವನ್ನು ಪ್ರತಿನಿಧಿಸಿದ್ದ ತಂಡದಲ್ಲಿ ಕರ್ನಾಟಕದ ಮೂವರು ಯುವತಿಯರು ದೇಶಕ್ಕೆ ಗೌರವ ತಂದು ಕೊಡುವ ಕೆಲಸ ಮಾಡಿದ್ದಾರೆ. ಇಂಡೋ ನೇಪಾಳ ಚಾಂಪಿಯನ್ಶಿಪ್ ನಲ್ಲಿ ಭಾರತ ಶ್ರೀಲಂಕಾ ಬಾಂಗ್ಲಾದೇಶ ನೇಪಾಳ ಮತ್ತು ಮಲೇಶಿಯಾ ತಂಡಗಳು ಭಾಗವಹಿಸಿದ್ದವು. ಭಾರತ ಚಿನ್ನದ ಪದಕ ಗೆದ್ದು ದೊಡ್ಡ ಸಾಧನೆ ಮಾಡಿದೆ.

ಕಾಪು ತಾಲೂಕು ಶಿರ್ವದ ಶಮಿತಾ ಮತ್ತು ಧನ್ಯ, ಮುದರಂಗಡಿಯ ರಶ್ಮೀ ಥ್ರೋ ಬಾಲ್ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಂಡ ಹೆಮ್ಮೆಯ ಆಟಗಾರ್ತಿಯರು. ಇವರಲ್ಲಿ ಶಮಿತಾ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ನೇರವಾಗಿ ಆಯ್ಕೆಯಾದರು.
ಪೈನಲ್ ಪಂದ್ಯಾಟದಲ್ಲಿ ಮೊದಲ ಸೆಟ್‌ನಲ್ಲಿ ಭಾರತ 20 ಮತ್ತು ನೇಪಾಳ 25 ಅಂಕಗಳಿಂದ ಮುನ್ನಡೆಯನ್ನು ಸಾಧಿಸಿತ್ತು. 2ನೇ ಸೆಟ್‌ನಲ್ಲಿ ಭಾರತ 25 ಮತ್ತು ನೇಪಾಳ 15 ಮತ್ತು ಅಂತಿಮ ಸೆಟ್‌ನಲ್ಲಿ ಭಾರತ 25 ಮತ್ತು ನೇಪಾಳ 18 ಅಂಕಗಳಿಂದ ಭಾರತ ತ್ರೋಬಾಲ್ ತಂಡ ಜಯಭೇರಿಯನ್ನು ಬಾರಿಸಿತು. ಪೈನಲ್ ಪಂದ್ಯಾಟದ ಉತ್ತಮ ಆಟಗಾರ್ತಿಯಾಗಿ ಸೌಂದರ್ಯ ಹಾಗೂ Best Smasher ಆಗಿ ಶಮಿತಾ ಆಯ್ಕೆಯಾದರು.