Connect with us

    LATEST NEWS

    ಶೃದ್ದಾ ಹತ್ಯೆ ಪ್ರಕರಣ – 35 ದೇಹದ ತುಂಡುಗಳಲ್ಲಿ 10 ಪತ್ತೆ….!!

    ನವದೆಹಲಿ ನವೆಂಬರ್ 15: ಇಡೀ ದೇಶವೇ ಬೆಚ್ಚಿ ಬಿಳಿಸುವ ರೀತಿಯಲ್ಲಿ ನಡೆದಿರುವ ಶೃದ್ದಾ ಎಂಬ ಯುವತಿಯ ಕೊಲೆ ಪ್ರಕರಣ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಆರೋಪಿ ಎಸೆದ ಶೃದ್ದಾ ದೇಹದ 35 ಭಾಗಗಳಲ್ಲಿ 10 ತುಂಡು ಪತ್ತೆಯಾಗಿದೆ.


    ಅಫ್ತಾಬ್ ಎಂಬ ಯುವಕ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾಳನ್ನು ಹತ್ಯೆ ಮಾಡಿ 35 ತುಂಡುಗಳನ್ನಾಗಿ ಕತ್ತರಿಸಿ ಎಸೆದಿದ್ದ. ಈ ಪೈಕಿ ದೇಹದ 12 ತುಂಡುಗಳು ಪತ್ತೆಯಾಗಿದ್ದು, ತಲೆ ಭಾಗದ ದೇಹದ ತುಂಡು ಇನ್ನಷ್ಟೇ ಪತ್ತೆಯಾಗಬೇಕಿದೆ. ಶ್ರದ್ದಾ ಕೊಲೆಯಾದ ಚತ್ತಾರ್ ಪುರದ ಫ್ಲಾಟ್ ಹಾಗೂ ಆಕೆಯ ದೇಹವನ್ನು ತುಂಡರಿಸಿ ಬಿಸಾಡಿದ್ದ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.


    ಈ ವರೆಗೂ ವಶಕ್ಕೆ ಪಡೆಯಲಾಗಿರುವ ಮಾದರಿಗಳನ್ನು ಅವೆಲ್ಲವೂ ಮನುಷ್ಯರದ್ದೇ? ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅವುಗಳನ್ನು ಪರೀಕ್ಷೆಗೆ ಕಳಿಸಲಾಗಿದೆ. ಮನುಷ್ಯರದ್ದು ಎಂದು ಶಂಕಿಸಲಾಗಿರುವ 12 ತುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು ವಿಧಿವಿಜ್ಞಾನ ತಜ್ಞರಿಗೆ ಕಳಿಸಲಾಗಿದ್ದು, ಅದನ್ನು ಶ್ರದ್ಧಾಳದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಆಕೆಯ ತಂದೆಯ ಡಿಎನ್ಎ ಜೊತೆ ಹೋಲಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ತಲೆಯ ಭಾಗ ಇನ್ನಷ್ಟೇ ಪತ್ತೆಯಾಗಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply