Connect with us

    LATEST NEWS

    ಪ್ರೆಯಸಿಯ ದೇಹದ ತುಂಡುಗಳನ್ನು ಫ್ರಿಡ್ಜ್ ನಲ್ಲಿಟ್ಟು ಮತ್ತೊಬ್ಬಳ ಜೊತೆ ಚಕ್ಕಂದ ಆಡ್ತಿದ್ದ ಕೊಲೆಗಾರ

    ನವದೆಹಲಿ: ಇಡೀ ದೇಶವನ್ನೆ ಬೆಚ್ಚಿಬಿಳಿಸಿದ್ದ ದೆಹಲಿ ಶೃದ್ದಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೆ ಮಾಹಿತಿಗಳು ಇದೀಗ ಹೊರ ಬರಲಾರಂಭಿಸಿದೆ. ಕೊಲೆಗಾರ ಅಫ್ತಾಬ್, ಶ್ರದ್ಧಾಳನ್ನು (Shraddha) ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್‍ಮೆಂಟ್‍ಗೆ ಕರೆದು ಚಕ್ಕಂದ ಆಡ್ತಿದ್ದ ಎಂಬ ಮಾಹಿತಿ ಇದೀಗ ವಿಚಾರಣೆ ವೇಳೆ ಬಂದಿದೆ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.


    ಕೊಲೆಗಾರ ಅಫ್ತಾಬ್ ಹಾಗೂ ಶ್ರದ್ಧಾ ಇಬ್ಬರು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. 3 ವರ್ಷದ ಹಿಂದೆ ಮುಂಬೈನಲ್ಲಿ ಭೇಟಿಯಾಗಿದ್ದರು. ಅವರು ಅದಾದ ಬಳಿಕ ದೆಹಲಿಗೆ ಬಂದು ಅಲ್ಲೂ ಲಿವಿಂಗ್ ಇನ್ ರಿಲೆಷನ್‍ಶಿಪ್‍ನಲ್ಲಿದ್ದರು. ಅದಾದ ಬಳಿಕ ಇಬ್ಬರ ಮಧ್ಯೆ ಮದುವೆ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಅದಾದ ಬಳಿಕ ಶ್ರದ್ಧಾಳ ದೇಹದ ಭಾಗಗಳನ್ನು ದೆಹಲಿ ಕಾಡಿನಲ್ಲಿ ವಿಲೇವಾರಿ ಮಾಡಿದ್ದ.


    ಈ ಮಧ್ಯೆ ಅಂದರೆ ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ ಅಫ್ತಾಬ್ ಅದೇ ಡೆಟಿಂಗ್ ಆ್ಯಪ್ ಮೂಲಕ ಮತ್ತೊಬ್ಬ ಯುವತಿಯನ್ನು ಭೇಟಿಯಾಗಿ ಡೇಟ್ ಮಾಡಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೇ ಅಫ್ತಾಬ್ ಆ ಯುವತಿಯನ್ನು ಆಗಾಗ ಮನೆಗೂ ಕರೆ ತಂದು ಚಕ್ಕಂದ ಆಡಿದ್ದ. ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತರುವ ವೇಳೆ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್‌ನಿಂದ ತೆಗೆದು ಕಬೋರ್ಡ್‍ನಲ್ಲಿ ಇಡುತ್ತಿದ್ದ ಎಂಬ ವಿಷಯ ಇದೀಗ ಬಯಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply