LATEST NEWS
ಉಡುಪಿ: ಬಿಗಿ ಕರ್ಫ್ಯೂಗೆ ಜನರ ಡೋಂಟ್ ಕೇರ್

ಉಡುಪಿ, ಮೇ 10: ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗಿರುವುದರಿಂದ ಇಂದಿನಿಂದ ರಾಜ್ಯ ಸರ್ಕಾರ ಕಠಣ ಕರ್ಪ್ಯೂ ಗೆ ಆದೇಶ ನೀಡಿದರು, ಉಡುಪಿ ಜನರಿಗೆ ಮಾತ್ರ ಡೋಂಟ್ ಕೇರ್.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಓಡಾಟ ಸಾಮಾನ್ಯವಾಗಿದ್ದು, ವಾಹನಗಳ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕಲು ಪ್ರಯತ್ನಿಸುತ್ತಿದ್ದಾರೆ. ಕುಂಟುನೆಪ ಹೇಳಿಕೊಂಡು ಅಡ್ಡಾಡುವ ವಾಹನಗಳಿಗೆ ಪೋಲಿಸರು ತಡೆಯೊಡ್ಡುತ್ತಿದ್ದಾರೆ.

ನಗರದ ಶಿರಿಬೀಡುವಿನಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಆಸ್ಪತ್ರೆ, ಅಗತ್ಯವಸ್ತು ಮಾರಾಟದ ನೆಪದಲ್ಲಿ ಹಲವಾರು ವಾಹನಗಳು ಬಂದಿದ್ದು, ಅನಗತ್ಯ ಓಡಾಡುವವರನ್ನು ಪೊಲೀಸರು ವಾಪಾಸ್ ಕಳುಹಿಸುತ್ತಿದ್ದಾರೆ. ನಗರ ಭಾಗದಲ್ಲಿ ಮಾತ್ರ ಜನಸಂಚಾರ ಅಷ್ಟಾಗಿ ಕಂಡು ಬಂದಿಲ್ಲ.
Video: