DAKSHINA KANNADA
ಸುಳ್ಯ: ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಾಣಂತಿ ಸಾವು
ಸುಳ್ಯ , ಮೇ 10: ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಾಣಂತಿಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಮೂಲೆಮನೆ ವಿಶ್ವನಾಥ ಗೌಡರ ಪುತ್ರಿ, ಈಶ್ವರಮಂಗಲದ ಮುಂಡ್ಯ ಕೆಮ್ಮತ್ತಡ್ಕ ಮನೋಜ್‌ರವರ ಪತ್ನಿ ಶ್ರೀಮತಿ ಪೂಜಿತಾ ಮೃತಪಟ್ಟ ಮಹಿಳೆ.
ಪೂಜಿತಾರವರು ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆ ಬೆಳಿಗ್ಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದು ನಾರ್ಮಲ್ ಹೆರಿಗೆಯಾಗಿತ್ತು. ಆರೋಗ್ಯವಾಗಿಯೇ ಇದ್ದ ಅವರಿಗೆ ಮಧ್ಯಾಹ್ನ ವೇಳೆಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು.
ಸಂಜೆಯ ವೇಳೆಗೆ ಪೂಜಿತಾ ರವರು ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಮತ್ತೆ ತಡರಾತ್ರಿಯ ವೇಳೆ ಮತ್ತೆ ರಕ್ತಸ್ರಾವ ಉಂಟಾಗಿ ಅವರು ಮೃತಪಟ್ಟರೆಂದು ತಿಳಿದುಬಂದಿದೆ. ಇನ್ನು ಅವಳಿ ಮಕ್ಕಳು ಆರೋಗ್ಯವಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿದ್ದಾರೆ ಎನ್ನಲಾಗಿದೆ. ಮೃತ ಪೂಜಿತಾ ಅವರು ಬಿಎಡ್ ಅಧ್ಯಯನ ನಡೆಸಿದ್ದು, ಇತ್ತೀಚೆಗಷ್ಟೇ ಡಿಸ್ಟಿಂಕ್ಷನ್‌ನೊಂದಿಗೆ ಪಾಸಾಗಿದ್ದರು.
You must be logged in to post a comment Login