LATEST NEWS
ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವವರಿಗೆ ವೆಂಟಿಲೇಟರ್ ಕೊಡುವುದಿಲ್ಲ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ, ಮೇ 10: ಉಡುಪಿ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಗಳು ಸಾಕಷ್ಟು ಇವೆ, ಆಮ್ಲಜನಕ ಕೊಡುವುದಕ್ಕೆ ಸರಕಾರ ಬದ್ಧವಿದೆ
ವೆಂಟಿಲೇಟರ್ ಚಿಕಿತ್ಸೆ ಕೊಡಲು ನಮ್ಮಲ್ಲಿ ಅವಕಾಶ ಇದೆ. ಮನೆಯಿಂದ ನೇರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವವರಿಗೆ ವೆಂಟಿಲೇಟರ್ ಕೊಡುವುದಿಲ್ಲ ಇದು ಉಡುಪಿ ಜಿಲ್ಲಾಡಳಿತದ ಸ್ಪಷ್ಟ ಸೂಚನೆ.
ಎಷ್ಟು ವೆಂಟಿಲೇಟರ್ ತಯಾರು ಮಾಡಿದರೂ ಸಾಕಾಗದ ಸ್ಥಿತಿ ಇದೆ, ಜನರ ನಿರ್ಲಕ್ಷಕ್ಕೆ ನಾವು ಜವಾಬ್ದಾರರಲ್ಲ ರೋಗ ಲಕ್ಷಣ ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ, ಆರಂಭದಲ್ಲಿ ಆಕ್ಸಿಜನ್ ಕೊಟ್ಟು ಜೀವ ಉಳಿಸುವ ಅವಕಾಶ ಇದೆ
ಗಂಭೀರ ಆದಲ್ಲಿ ಐಸಿಯು, ವೆಂಟಿಲೇಟರ್ ಗೆ ಶಿಫ್ಟ್ ಮಾಡುತ್ತೇವೆ.
ನನಗೆ ವೆಂಟಿಲೇಟರ್ ಕೊಡುತ್ತೀರಾ ಎಂದು ಮನೆಯಿಂದ ಫೋನ್ ಮಾಡಬೇಡಿ, ಜನತೆಗೆ ಈ ನಿರ್ಲಕ್ಷದ ಬುದ್ಧಿ ಹೋಗಬೇಕು. ಬುದ್ಧಿವಂತರ ಜಿಲ್ಲೆಯವರು ಬುದ್ಧಿವಂತರಂತೆ ವರ್ತಿಸಿ, ಉಡುಪಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ, ಜನರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಮನೆಯಲ್ಲೇ ಕುಳಿತು ನೇರ ಐಸಿಯುಗೆ ಬಂದರೆ ಚಿಕಿತ್ಸೆ ಸಾಧ್ಯವಿಲ್ಲ.
ನಿಮ್ಮ ಜೀವದ ಜೊತೆ ನೀವೇ ಆಟವಾಡುತ್ತಿದ್ದೀರಿ ಕೊರೋನಾ ನಿರ್ಲಕ್ಷಿಸುವವರು ವಿರುದ್ಧ ಉಡುಪಿ ಡಿಸಿ ಗರಂ.
ಉಡುಪಿಯಲ್ಲಿ 950 ಹೆಚ್ಚು ಆಕ್ಸಿಜನ್ ಬೆಡ್ ಖಾಲಿಯಿದೆ ಉಡುಪಿಯಲ್ಲಿ ಮಹಾಮಾರಿ ಕೊರೊನಾ ಸೋಂಕು ವಿಪರೀತ ಹೆಚ್ಚಳ
ಜ್ವರ ಶೀತ ಕೆಮ್ಮು ನೆಗಡಿ ಅನ್ನು ನಿರ್ಲಕ್ಷ ಮಾಡುತ್ತಿರುವ ಜನ ಆಕ್ಸಿಜನ್ ಬೆಡ್ ಇಲ್ಲ ಎಂದು ಪ್ಯಾನಿಕ್ ಆಗದಿರಿ ಆಸ್ಪತ್ರೆಯ ಅಗತ್ಯ ಇಲ್ಲದವರು ಬೆಡ್ ಹುಡುಕುತ್ತಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿಕೆ ನೀಡಿದ್ದಾರೆ.
You must be logged in to post a comment Login