Connect with us

    LATEST NEWS

    ರಾಮಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದ ಮೋದಿ ಸರಕಾರ ವಿರುದ್ದ ಅಸಮಧಾನ ಹೊರ ಹಾಕಿದ ಪೇಜಾವರ ಶ್ರೀಗಳು

    ರಾಮಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದ ಮೋದಿ ಸರಕಾರ ವಿರುದ್ದ ಅಸಮಧಾನ ಹೊರ ಹಾಕಿದ ಪೇಜಾವರ ಶ್ರೀಗಳು

    ಉಡುಪಿ ನವೆಂಬರ್ 23: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಾಲ್ಕುವರೆ ವರ್ಷ ಕಾದಿದ್ದೇವೆ, ಕೇಂದ್ರ ಸರಕಾರ ಯಾವುದೇ ಕ್ರಮಕೈಗೊಂಡಿಲ್ಲ ಈ ಹಿನ್ನಲೆಯಲ್ಲಿ ಈಗ ಒತ್ತಾಯ ಮಾಡುತ್ತಿದ್ದೇವೆ ಎಂದು ಪೇಜಾವರ ಶ್ರೀಗಳು ಕೇಂದ್ರ ಸರಕಾರದ ವಿರುದ್ದ ತಮ್ಮ ಅಸಮಧಾನ ಹೊರ ಹಾಕಿದ್ದಾರೆ.

    ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರದ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರಕ್ಕೆ ಮೂರು ಮಾರ್ಗಗಳಿವೆ. ಸಂಯುಕ್ತ ಅಧಿವೇಶನದ ಮೂಲಕ ಸಮಸ್ಯೆ ಬಗೆಹರಿಸಬಹುದು, ಅಥವಾ ಲೋಕಸಭೆ- ರಾಜ್ಯಸಭೆ ಅಧಿವೇಶನದಲ್ಲಿ ತೀರ್ಮಾನಿಸಬಹುದು. ರಾಮ ಮಂದಿರ ನಿರ್ಮಾಕ್ಕೆ ಕೇಂದ್ರ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಬಹುದು.

    ಈಗಾಗಲೇ ದೇಶದಾದ್ಯಂತ ಜನರು ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದು, ಸುಪ್ರೀಂ ಕೋರ್ಟ್ ಜನಾಭಿಪ್ರಾಯದಂತೆ ಶೀಘ್ರ ತೀರ್ಮಾನಿಸಲಿ ಎಂದು ಹೇಳಿದರು. ಅಲ್ಲದೆ ಎಲ್ಲದಕ್ಕೂ ನ್ಯಾಯಾಲಯವನ್ನು ‌ಕಾಯುವುದಕ್ಕೆ ಸಾಧ್ಯವಿಲ್ಲ.

    ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ದಿಟ್ಟ ನಿರ್ದಾರ ತೆಗೆದುಕೊಳ್ಳಲಿ, ಅವರು ತೆಗೆದುಕೊಳ್ಳುವ ದೃಢ ನಿರ್ಧಾರ ಕೇಂದ್ರ ಸರ್ಕಾರಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.

    ಈ ಹಿಂದೆ ವಾಜಪೇಯಿ ಸರ್ಕಾರಕ್ಕಿಂತಲೂ ಕೇಂದ್ರದ ಮೋದಿ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ, ಅಲ್ಲದೆ ಬಹು ವಿಪಕ್ಷ ವಾಗಿರುವ ಕಾಂಗ್ರೆಸ್ ಈಗ ವಿರೋಧ ಮಾಡುವ ಸಾಧ್ಯತೆ ತೀರಾ ಕಡಿಮೆ ಇದೆ. ಅಲ್ಲದೆ ಚುನಾವಣೆ ಹತ್ತಿರ ಇರುವುದರಿಂದ ಯಾರು ವಿರೋಧ ಮಾಡಲಿಕ್ಕಿಲ್ಲ, ಅಲ್ಲದೆ ವಿರೋಧ ಮಾಡುವ ಧೈರ್ಯ ಯಾರಿಗೂ ಇಲ್ಲ, ಹೀಗಾಗಿ ಕಾಂಗ್ರೆಸ್ ತಟಸ್ಥವಾಗಿ ಎಲ್ಲವನ್ನೂ ನೋಡುತ್ತಿದೆ.

    ಕಾಂಗ್ರೆಸ್ ರಾಮಮಂದಿರ ನಿರ್ಮಾಣವನ್ನು ವಿರೋಧಿಸಲೂ ಹೋಗುತ್ತಿಲ್ಲ. ಈ ಹಿನ್ನಲೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈಗ ಅನುಕೂಲವಾದ ವಾತಾವರಣವಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

    ರಾಮಮಂದಿರ ಭಾವನಾತ್ಮಕ ವಿಚಾರ ನಾಲ್ಕೂವರೆ ವರ್ಷ ದಿಂದ ಮಂದಿರ ನಿರ್ಮಾಕ್ಕೆ ಕಾಯುತ್ತಾ ಇದ್ದೇವೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ಚರ್ಚೆ ಮಾಡುತ್ತಿಲ್ಲ. ಸಂತರಿಗೆ ಚುನಾವಣೆಯ ಯಾವುದೇ ಅಗತ್ಯವಿಲ್ಲ, ಚುನಾವಣೆ ನಂತರ ಮುಂದೇನು ಎಂಬ ಪರಿಸ್ಥಿತಿ ಗೊತ್ತಿಲ್ಲ. ಹೀಗಾಗಿ ಈಗಲೇ ಮಂದಿರ ನಿರ್ಮಾಣ ಮಾಡಿ ಎಂದು ಪೇಜಾವರ ಶ್ರೀಗಳು ಒತ್ತಾಯಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply