ಮಂಗಳೂರಿನ ಬಸ್ ನಿಲ್ದಾಣಗಳಲ್ಲಿ ಕುಡುಕರ ಹಾವಳಿ

ಮಂಗಳೂರು ನವಂಬರ್ 23: ಮಂಗಳೂರಿನ ಬಸ್ ನಿಲ್ದಾಣಗಳಲ್ಲಿ ಕುಡುಕರ ಹಾವಳಿ ಜಾಸ್ತಿಯಾಗಿದ್ದು, ಸಾರ್ವಜನಿಕರು ಅದರಲ್ಲೂ ಮಹಿಳೆಯರು ಬಸ್ ನಿಲ್ದಾಣಗಳಲ್ಲಿ ನಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ.

ರಾತ್ರಿ ಕಂಠಪೂರ್ತಿ ಕುಡಿದ ನಗರದ ಬಸ್ ನಿಲ್ದಾಣಗಳಲ್ಲಿ ಈ ಕುಡುಕರು ನಿದ್ರೆ ಮಾಡುತ್ತಿದ್ದು ಬೆಳ್ಳಂಬೆಳಗ್ಗೆಯೆ ಕೆಲಸಕ್ಕೆ ತೆರಳು ಬಸ್ ನಿಲ್ದಾಣಕ್ಕೆ ಬರುವ ಸಾರ್ವಜನಿಕರು ಈ ಕುಡುಕರ ಹಾವಳಿಯಿಂದ ತೊಂದರೆ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರಿನ ಕೆ ಎಸ್ ಆರ್ ಟಿಸಿ ಬಳಿಯ ಬಸ್ ಸ್ಟಾಂಡ್‍ನಲ್ಲಿ ಕಂಠಪೂರ್ತಿ ಕುಡಿದು ಕುಡುಕರು ಹೊರಳಾಡುತ್ತಿದ್ದು, ಸಾರ್ವಜನಿಕರಿಗೆ ಫುಟ್ ಪಾತ್‍ನಲ್ಲಿ ನಡೆದಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬಸ್ಸಿಗಾಗಿ ಬಸ್ ಸ್ಟಾಂಡ್‍ನಲ್ಲಿ ಕಾಯಬೇಕಾದ ಹೆಂಗಸರು ಕುಡುಕರ ಹಾವಳಿಯಿಂದ ಮುಜುಗರ ಪಡುತ್ತಿದ್ದಾರೆ. ಮಧ್ಯಪಾನ ಮಾಡುವುದು ಅವರವರ ವೈಯಕ್ತಿಕ ವಿಚಾರ ಆದರೆ ಸೂರ್ಯ ನೆತ್ತಿಗೆರುವಂತಹ ಸಮಯ ಬಂದ್ರು ಕೂಡ ರಸ್ತೆಯಲ್ಲೇ ಬಿದ್ದುಕೊಂಡಿರುವ ಇಂತಹವರಿಂದ ಜನರಿಗೆ ತೊಂದರೆ ಆಗ್ತಾ ಇದೆ. ಈ ಬಗ್ಗೆ ಆದಷ್ಟು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

VIDEO

Facebook Comments

comments