Connect with us

    LATEST NEWS

    ಉಡುಪಿಯಲ್ಲಿ ಜನಿಸಿದ ಅನಾಥ ಸ್ವಿಜರ್ಲ್ಯಾಂಡಿನಲ್ಲಿ ಈತ ಸಂಸದ

    ಉಡುಪಿಯಲ್ಲಿ ಜನಿಸಿದ ಅನಾಥ ಮಗು ಸ್ವಿಜರ್ಲೆಂಡ್‌ ಸಂಸದನಾದ ಸ್ಟೋರಿ

    ಉಡುಪಿ ಡಿಸೆಂಬರ್ 15: ಉಡುಪಿ ಮೂಲದ ಅನಾಥ ಮಗು, ಈಗ ಸ್ವಿಜರ್ಲೆಂಡ್‌ ಸಂಸದರಾಗಿ ಆಯ್ಕೆಯಾಗಿದ್ದಾರೆ. ಉಡುಪಿ ಮೂಲದ ನಿಕ್ಲಾಸ್‌ ನಿಕ್‌ ಸ್ಯಾಮ್ಯುಯೆಲ್‌ ಗುಗ್ಗರ್ ಅವರು ಸ್ವಿಜರ್ಲೆಂಡ್‌ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸ್ವಿಜರ್ಲೆಂಡ್‌ ಸಂಸದರಾಗಿ ಆಯ್ಕೆಯಾಗಿರುವುದು ಇದೇ ಮೊದಲಾಗಿದೆ.

    ನಿಕ್ ಗುಗ್ಗರ್ 1970ರ ಮೇ 1ರಂದು ಉಡುಪಿಯ ಮಿಷನ್‌ ಆಸ್ಪತ್ರೆಯಲ್ಲಿ ಜನಿಸಿದ್ದರು. ಇವರು ಜನನದ ನಂತರ ಇವರನ್ನು ಅವರ ತಾಯಿ ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದಳು. ನಂತರ ಅವರು ಕೇರಳದ ತಲಶ್ಶೇರಿಯಲ್ಲಿ ಅನಾಥಾಶ್ರಮ ನಡೆಸುತ್ತಿದ್ದ ಜರ್ಮನ್ ಮಿಷನರಿಗೆ ಸೇರಿದ ಸ್ವಿಜರ್ಲೆಂಡ್‌ನ ಫ್ರಿಟ್ಸ್‌ ಗುಗ್ಗರ್‌ ಹಾಗೂ ಎಲಿಜಬೆತ್‌ ಗುಗ್ಗರ್‌ ಉಡುಪಿಯಲ್ಲಿದ್ದ ಈ ಮಗುವನ್ನು ದತ್ತು ಪಡೆದಿದ್ದರು. ಇಲ್ಲಿಂದ ಬಳಿಕ ಅವರಿಗೆ ಜನಿಸಿದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸ್ವಿಜರ್ಲೆಂಡ್‌ಗೆ ತೆರಳಿದರು.

    ನಿಕ್ ಗುಗ್ಗರ್ ದತ್ತು ಪಡೆದಿದ್ದ ಜರ್ಮನ್ ದಂಪತಿಗಳು ಅಲ್ಲಿನ ಪ್ರೊಟೆಸ್ಟೆಂಟ್‌ ಚರ್ಚ್‌ಗಳ ಅಭಿವೃದ್ಧಿ ಯೋಜನೆ ಹಾಗೂ ಕಿವುಡ,ಮೂಕರ ಸಂಸ್ಥೆಯೊಂದರಲ್ಲಿ ಸೇವೆಸಲ್ಲಿಸುತ್ತಿದ್ದರು, ಇದರಿಂದಾಗಿ ನಿಕ್ಲಾಸ್‌ ಗೆ ಭಿನ್ನ ಸಾಮರ್ಥ್ಯ‌ದ ಜನರೊಂದಿಗೆ ಸಂಪರ್ಕ ಹೊಂದುವ ಅವಕಾಶ ಸಿಕ್ಕಿತು. ಇದು ನಿಕ್ ಗುಗ್ಗರ್ ಗೆ ಸಾಮಾಜಿಕ ಕಾರ್ಯಗಳಲ್ಲಿ ಉತ್ತಮ ಆಸಕ್ತಿ ವಹಿಸಲು ಕಾರಣವಾಯಿತು. ಮೆಕ್ಯಾನಿಕ್‌ ವೃತ್ತಿಯೊಂದಿಗೆ ಶಿಕ್ಷಣ ಮುಗಿಸಿರುವ ನಿಕ್ ಗುಗ್ಗರ್ ಕೊಲಂಬಿಯಾದಲ್ಲಿ ಸಾಮಾಜಿಕ ಇಂಟರ್ನ್‌ಶಿಪ್‌ ಪೂರೈಸಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳನ್ನು ಮುಂದುವರೆಸಿದ ನಿಕ್ಲಾಸ್‌ ಜನರೊಂದಿಗಿನ ಒಡನಾಟ ಮುಂದುವರಿಸಿದರಲ್ಲದೆ ಸಾಮಾಜಿಕ ಕಾರ್ಯಕರ್ತರ ಪರ ಕೆಲಸ ಮಾಡಿದರು.
    ನಿಕ್ಲಾಸ್‌ ಅವರು ಇವಾಂಜೆಲಿಕಲ್‌ ಪೀಪಲ್ಸ್‌ ಪಾರ್ಟಿ(ಇಪಿಪಿ) ಕೇಂದ್ರ ಮಂಡಳಿ ಸದಸ್ಯರಾಗಿದ್ದಾರೆ. 2002-2014ರ ಅವಧಿಯಲ್ಲಿ ಸಿಟಿ ಕೌನ್ಸಿಲ್‌ ಸದಸ್ಯರಾಗಿ ಆಯ್ಕೆಯಾಗಿದ್ದ ನಿಕ್ ಗುಗ್ಗರ್, 2008ರಿಂದ ಇಪಿಪಿ ಅಧ್ಯಕ್ಷರಾಗಿ ಕೂಡ ಕೆಲಸ ನಿರ್ವಹಿಸಿದ್ದಾರೆ. 2014-2017ರ ಅವಧಿಯಲ್ಲಿ ಜ್ಯೂರಿಚ್‌ ಕ್ಯಾಂಟನ್‌ ಕೌನ್ಸಿಲ್‌ ಸದಸ್ಯರಾಗಿಯೂ ಅವರು ಅನುಭವಗಳಿಸಿದ್ದಾರೆ.

    ನಿಕ್‌ ಗುಗ್ಗರ್‌ 2017ರ ನವೆಂಬರ್ 27ರಂದು ಇವಾಂಜೆಲಿಕಲ್‌ ಪೀಪಲ್ಸ್‌ ಪಾರ್ಟಿ(ಇಪಿಪಿ) ಅಭ್ಯರ್ಥಿಯಾಗಿ ಸ್ವಿಸ್‌ ನ್ಯಾಷನಲ್‌ ಕೌನ್ಸಿಲ್‌ ನ ಸದಸ್ಯತ್ವ ಪಡೆದಿದ್ದಾರೆ. ಈ ಮೂಲಕ ಭಾರತೀಯ ಮೂಲದ ವ್ಯಕ್ತಿಯೊಬ್ಬ ಸ್ವಿರ್ಜಲೆಂಡ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ನಿಕ್ ಗುಗ್ಗರ್ ಸ್ವಿಜರ್ಲೆಂಡ್ ನ ಅತ್ಯಂತ ಕಿರಿಯ ಸಂಸದ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply