LATEST NEWS
ಉಡುಪಿ ಜಿಲ್ಲೆಯ ಮೂರನೇ ಕೊರೊನಾ ರೋಗಿ ಬಿಡುಗಡೆ… ಸದ್ಯ ಉಡುಪಿ ಕೊರೊನಾ ಮುಕ್ತ ಜಿಲ್ಲೆ

ಉಡುಪಿ ಜಿಲ್ಲೆಯ ಮೂರನೇ ಕೊರೊನಾ ರೋಗಿ ಬಿಡುಗಡೆ .. ಸದ್ಯ ಉಡುಪಿ ಕೊರೊನಾ ಮುಕ್ತ ಜಿಲ್ಲೆ
ಉಡುಪಿ ಎಪ್ರಿಲ್ 18: ಉಡುಪಿ ಜಿಲ್ಲೆಯಲ್ಲಿ ಇಂದು ಮೂರನೇ ಕೊರೊನಾ ರೋಗಿ ಬಿಡುಗಡೆಗೊಳ್ಳುವ ಮೂಲಕ ಉಡುಪಿ ಜಿಲ್ಲೆ ಸದ್ಯ ಈಗ ಕೊರೊನಾ ಮುಕ್ತ ಜಿಲ್ಲೆಯಾಗಿ ರೂಪುಗೊಂಡಿದೆ. ಉಡುಪಿ ಜಿಲ್ಲೆಯ ಕೊರೊನಾ ಮಹಾಮಾರಿ ಬಂದ ನಂತರ ಜಿಲ್ಲೆಯ ಜಿಲ್ಲಾಡಳಿತ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೇವಲ ಮೂರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆ ಉಡುಪಿ ಜಿಲ್ಲೆಯ ಟಿಎಂಎ ಪೈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿತ್ತು. ಇಲ್ಲಿಯವರೆಗೆ ಜಿಲ್ಲೆಯಲ್ಲಿ ದಾಖಲಾದ ಎಲ್ಲಾ ಕೊರೊನಾ ಪಾಸಿಟಿವ್ ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು ಡಿಸ್ಚಾರ್ಜ್ ಆದ ರೋಗಿ ಮಾರ್ಚ್ 29 ರಂದು ಪ್ರಕರಣ ಬೆಳಕಿಗೆ ಬಂದಿತ್ತು, ಕೇರಳಕ್ಕೆ ತೆರಳಿದ್ದ ವ್ಯಕ್ತಿಯನ್ನು ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿತ್ತು. ಮಾರ್ಚ್ 24 ರಂದು ಕೇರಳದಿಂದ ಉಡುಪಿಗೆ ಬಂದಿದ್ದ ಯುವಕ, ಇಲೆಕ್ಟ್ರೀಷನ್ ಕೆಲಸಕ್ಕೆ ತೆರಳಿದ್ದ ಯುವಕನಿಗೆ ಸೋಂಕು ತಗಲಿತ್ತು. ಇಂದು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆ ಕೊರೋನಾ ಮುಕ್ತವಾಗಿದೆ.