LATEST NEWS
ಶಂಕಿತ ಉಗ್ರರ ನಂಟು – ವಿದ್ಯಾರ್ಥಿ ರಿಹಾನ್ ಶೇಖ್ ನ ಮನೆಯಲ್ಲಿ ಎನ್ಐಎ ಶೋಧ
ಉಡುಪಿ ಜನವರಿ 06: ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಆರೋಪಿಗಳ ಜತೆ ಲಿಂಕ್ ಇದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡ ಎನ್‌ಐಎ ಶಂಕಿತ ವಿದ್ಯಾರ್ಥಿ ರಿಹಾನ್ ಶೇಖ್ ನ ಉಡುಪಿ ಜಿಲ್ಲೆಯ ಬ್ರಹ್ಮಾವರದ ವಾರಂಬಳ್ಳಿಯಲ್ಲಿರುವ ಫ್ಲಾಟ್ ನಲ್ಲಿರುವ ಮನೆ ಮಹಜರು ನಡೆಸಿತು.
ಬೆಂಗಳೂರಿನಿಂದ ಆಗಮಿಸಿದ್ದ ಎನ್ ಐ ಎ ಅಧಿಕಾರಿಗಳ ತಂಡ ಗುರುವಾರ ದಿನ ಪೂರ್ತಿ ಫ್ಲ್ಯಾಟ್ ನಲ್ಲಿ ಮಹಜರು ನಡೆಸಿ ಕೆಲವು ಅಮೂಲ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದೇ ಸಂದರ್ಭ ರಿಹಾನ್ ಕುಟುಂಬದ ಸದಸ್ಯರನ್ನು ಕೂಡಾ ವಿಚಾರಣೆ ನಡೆಸಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಬಳಿಕ ಸಂಜೆ ಹೊತ್ತಿಗೆ ಶಂಕಿತ ಯುವಕನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.