KARNATAKA
ಉಡುಪಿ ನೇಜಾರು ಹತ್ಯಾಕಾಂಡ ; ಕೋಡಿಬೆಂಗ್ರೆ ಜುಮಾ ಮಸೀದಿಯಲ್ಲಿ ಸಾವಿರಾರು ಜನರ ಅಶ್ರುತರ್ಪಣ ಮಧ್ಯೆ ಅಂತ್ಯಕ್ರೀಯೆ..!
ಉಡುಪಿ: ಉಡುಪಿ ನೇಜಾರು ಹತ್ಯಾಕಾಂಡ ದಲ್ಲಿ ಬಲಿಯಾದ ನಾಲ್ವರ ಅಂತ್ಯಕ್ರಿಯೆಯು ಉಡುಪಿ ಕೋಡಿಬೆಂಗ್ರೆ ಜುಮಾ ಮಸೀದಿಯಲ್ಲಿ ಸೋಮವಾರ ಅಪರಾಹ್ನ ಸಹಸ್ರಾರು ಮಂದಿಯ ಸಮ್ಮುಖದಲ್ಲಿ ನೆರವೇರಿತು.
ಬೆಳಗ್ಗೆ 11ಗಂಟೆಯಿಂದ ಹಸೀನಾರ ಸಹೋದರ ಮನೆಯ ಆವರಣದಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಜಾತಿ ಧರ್ಮದ ಎಲ್ಲೆ ಮೀರಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸರ್ವಧರ್ಮೀಯರು ಅಂತಿಮ ದರ್ಶನ ಪಡೆದು ಕಣ್ಣೀರಾದರು.
ಕಾನೂನು ಪ್ರತಕ್ರೀಯೆಗಳನ್ನು ಮುಗಿಸಿ ಪಾರ್ಥಿವ ಶರೀರ ಕೊಂಡು ಬರುತ್ತಿದ್ದಂತೆ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಸಾರ್ವಜನಿಕರ ದರ್ಶನ ಬಳಿಕ 12.15ರ ಸುಮಾರಿಗೆ ನಾಲ್ಕು ಪಾರ್ಥಿವ ಶರೀರಗಳನ್ನು ವಾಹನಗಳಲ್ಲಿ ಕೋಡಿಬೆಂಗ್ರೆ ಮಸೀದಿಗೆ ಕೊಂಡೊಯ್ಯಲಾಯಿತು.
You must be logged in to post a comment Login