Connect with us

    LATEST NEWS

    ಉಡುಪಿ – ಅನ್ನದಲ್ಲಿ ವಿ*ಷ ಬೇರೆಸಿ ತಾನೇ ಕೈತುತ್ತು ತಿನ್ನಿಸಿದ ಕೊ*ಲೆ ಪಾ*ತ*ಕಿ

    ಉಡುಪಿ ಅಕ್ಟೋಬರ್ 27: ಕಾರ್ಕಳದ ಅಜೆಕಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಒಂದೊಂದೆ ಮಾಹಿತಿಗಳು ಹೊರ ಬರಲಾರಂಭಿಸಿದೆ. ಪ್ರಿಯಕರನ ಜೊತೆ ಗಂಡನ ಕೊಂದಿದ್ದ ಪ್ರತಿಮಾ ತನ್ನ ಗಂಡ ಸಾಯಲು ಮಾಡಿರುವ ಹೀನ ಕೃತ್ಯಗಳನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.


    ಅಜೆಕಾರಿನಲ್ಲಿ ನಡೆದ ಬಾಲಕೃಷ್ಣ ಅವರ ಹತ್ಯೆ ಪ್ರಕರಣಕ್ಕೆ ಸಂಬಂಸಿದಂತೆ ಅರೆಸ್ಟ್ ಆಗಿರುವ ಬಾಲಕೃಷ್ಣ ಅವರ ಪತ್ನಿ ಪ್ರತಿಮಾಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಜೆಕಾರು ಠಾಣೆ ಪೊಲೀಸರ ವಿಚಾರಣೆ ವೇಳೆ ಆರೋಪಿ ಪ್ರತಿಮಾ ಪತಿ ಬಾಲಕೃಷ್ಣ (44) ಅವರನ್ನು ಹತ್ಯೆ ಮಾಡಿದ್ದು ಹೇಗೆ ಎಂಬುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಅಕ್ಟೋಬರ್​ 20ರ ತಡರಾತ್ರಿ ಬಾಲಕೃಷ್ಣ ಮೃತಪಟ್ಟಿದ್ದಾರೆ. ಸಾವಿಗೂ ಮುನ್ನ ಕಳೆದ 25 ದಿನಗಳಿಂದ ಜ್ವರ, ವಾಂತಿಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಅವರನ್ನು ಕೆಎಂಸಿ, ನಿಮಾನ್ಸ್​ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಸಿದ್ದರೂ, ಪ್ರಯೋಜನವಾಗಲಿಲ್ಲ. ಬಾಲಕೃಷ್ಣ ಉಸಿರು ಚಲ್ಲಿದರು. ಆದರೆ, ಬಾಲಕೃಷ್ಣ ಮೃತಪಟ್ಟಿದ್ದು ಕಾಯಿಲೆಯಿಂದ ಅಲ್ಲ, ಕೊಲೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.


    ತನ್ನ ಪತಿ ಕಾಯಿಲೆಯಿಂದ ಮೃತಪಟ್ಟ ಅಂತ ನಂಬಿಸಲು ಪತ್ನಿ ಪ್ರತಿಮಾ, ಬಾಲಕೃಷ್ಣ ಅವರಿಗೆ ಸ್ಲೋ ಪಾಯ್ಸನ್​​ ನೀಡುತ್ತಿದ್ದಳಂತೆ. ಅಲ್ಲದೇ, ಈ ಸ್ಲೋ ಪಾಯ್ಸನ್​ ಅನ್ನು ಪ್ರಿಯಕರ ದಿಲೀಪ್​ ಹೆಗ್ಡೆ ತಂದುಕೊಟ್ಟಿದ್ದಾನೆ ಎಂದು ಪೊಲೀಸರ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾಳೆ. ಪ್ರತಿಮಾ ಪತಿ ಬಾಲಕೃಷ್ಣ ಅವರಿಗೆ ಅನ್ನದಲ್ಲಿ ಕ್ಯಾನ್ಸರ್ ಗೆ ಬಳಸುವ ಮದ್ದನ್ನು ಬೆರೆಸಿಕೊಡುತ್ತಿದ್ದಳು ಎಂದುೂ ಹೇಳಲಾಗಿದ್ದು, ಈ ಮದ್ದು ಯಾವುದೇ ಟೇಸ್ಟ್​ ಹೊಂದಿರುವುದಿಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಅನ್ನದ ಜೊತೆ ಮದ್ದನ್ನು ಬೆರೆಸಿ ನೀಡುತ್ತಿದಳು. ವಿಷ ಇದೆ ಎಂದು ಅರಿಯದೆ ಬಾಲಕೃಷ್ಣ ಊಟ ಮಾಡುತ್ತಿದ್ದರು. ಹಲವು ಬಾರಿ ವಿಷದ ಅನ್ನವನ್ನೇ ಪ್ರತಿಮಾ ಕೈ ತುತ್ತು ಮಾಡಿ ಬಾಲಕೃಷ್ಣ ಅವರಿಗೆ ತಿನ್ನಿಸುತ್ತಿದ್ದಳು ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

    ಕೊಲೆಗಾಗಿ ಪ್ರತಿಮಾ ಜತೆ ಸೇರಿ ಯೋಜನೆ ರೂಪಿಸಿದ್ದ ದಿಲೀಪ್‌ ಅದಕ್ಕಾಗಿ ಉಡುಪಿಯಲ್ಲಿ ವಿಷ ಖರೀದಿಸಿದ್ದ. ಅನಂತರ ಅದನ್ನು ಆತ ಪ್ರತಿಮಾಳಿಗೆ ನೀಡಿದ್ದ. ಪ್ರಸ್ತುತ ಪೊಲೀಸ್‌ ಕಸ್ಟಡಿಯಲ್ಲಿರುವ ದಿಲೀಪ್‌ನನ್ನು ಶನಿವಾರ ಉಡುಪಿಗೆ ಕರೆ ತಂದು ವಿಷ ಖರೀದಿಸಿದ ಅಂಗಡಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ದಿಲೀಪ್‌ ಮತ್ತು ಪ್ರತಿಮಾಳ ಮೊಬೈಲ್‌ ಫೋನ್‌ ಹಾಗೂ ಸ್ಕೂಟರ್‌ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಾಗಿದೆ ಎಂದು ಎಸ್‌ಪಿ ಡಾ| ಅರುಣ್‌ ಕುಮಾರ್‌ ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *