Connect with us

    LATEST NEWS

    ಉಡುಪಿ ಸೀರೆ ಗೆ ಈಗ ಡಿಮಾಂಡಪ್ಪೋ ಡಿಮಾಂಡ್

    ಉಡುಪಿ ನವೆಂಬರ್ 18: ಈ ಬಾರಿಯ ದೀಪಾವಳಿ ಸಂದರ್ಭ ಉಡುಪಿ ಚಿಕ್ಕಮಗಳೂರು ಸಂಸದೆ ರಾಷ್ಟ್ರದ ರಾಜಕೀಯ ನಾಯಕಿಯರಿಗೆ ಕೈಮಗ್ಗದ ಉಡುಪಿ ಸೀರೆಯನ್ನು ಗಿಪ್ಟ್ ಮಾಡಿದ್ದು, ಶೋಭಾ ಕರಂದ್ಲಾಜೆಯವರ ಈ ಅನಿರೀಕ್ಷಿತ ಗಿಫ್ಟ್ ಗೆ ವಿವಿಧ ರಾಜಕೀಯ ಪಕ್ಷಗಳ ನಾಯಕಿರು ಪಿಧಾ ಆಗಿದ್ದಾರೆ.


    ಬಿಜೆಪಿ ಸಂಸದೆ ಶೋಭಾ ಕೆರಂದ್ಲಾಜೆ ಈ ಬಾರಿಯ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದ್ದಾರೆ. ಪ್ರದಾನಿ ನರೇಂದ್ರ ಮೋದಿಯವರ ವೋಕಲ್ ಫಾರ್ ಲೋಕಲ್ ಕರೆಗೆ ಒಗಟ್ಟು, ಉಡುಪಿಯ ವಿಶ್ವವಿಖ್ಯಾತ ಕೈಮಗ್ಗದ ಉಡುಪಿ ಸೀರೆಯನ್ನು ವಿವಿಧ ಪಕ್ಷಗಳ ನಾಯಕಿಯರಿಗೆ ಗಿಫ್ಟ್ ಮಾಡಿದ್ದಾರೆ.


    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಸ್ಮೃತಿ ಇರಾನಿ, ಮೇನಕಾ ಗಾಂಧಿ, ಕನಿಮೋಳಿ, ಶೆಫಾಲಿ ವೈದ್ಯ, ಮೀನಾಕ್ಷಿ ಲೇಖಿ, ದೇಬಶ್ರೀ ಗೆ ಸೀರೆ ಗಿಫ್ಟ್ ಮಾಡಿದ್ದಾರೆ. ಈಗಾಗಲೇ ಹಲವರು ಸೀರೆಯನ್ನು ಉಟ್ಟು ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಪೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

    ದೀಪಾವಳಿ ಸಂದರ್ಭ ‘ಉಡುಪಿ ಸೀರೆ’ ಗೆ ಈಗ ಡಿಮಾಂಡ ಬಂದಿದ್ದು, ಉಡುಪಿ ಕೈ ಮಗ್ಗ ಈಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡದುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ಗಿಫ್ಟ್ ಪಡೆದ ನಾಯಕಿಯರಿಂದ ಟ್ವೀಟ್ಟರ್ ನಲ್ಲಿ ಹರ್ಷ ವ್ಯಕ್ತಪಡಿಸಿದ್ದು, ಸೀರೆ ಧರಿಸಿದ ಫೋಟೋ ಗಳನ್ನು ಹಂಚಿಕೊಂಡಿದ್ದಾರೆ. i

    Share Information
    Advertisement
    Click to comment

    You must be logged in to post a comment Login

    Leave a Reply