LATEST NEWS
ನೈಟ್ ಕರ್ಪ್ಯೂನಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಹೊಡೆತ – ಉಡುಪಿ ಶಾಸಕ ರಘುಪತಿ ಭಟ್

ಉಡುಪಿ ಎಪ್ರಿಲ್ 9: ಉಡುಪಿ ಹಾಗೂ ಮಣಿಪಾಲ್ ನಗರದಲ್ಲಿ ಕೊರೊನಾ ಕರ್ಪ್ಯೂ ಜಾರಿ ಆದೇಶವನ್ನು ಹಿಂಪಡೆಯುವಂತೆ ಉಡುಪಿ ಶಾಸಕ ರಘಪತಿ ಭಟ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು ಎಪ್ರಿಲ್ ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ದೈವದ ಕೋಲ ನಾಗಾರಾಧನೆ, ಯಕ್ಷಗಾನ ನಡೆಯಲಿದೆ. ಅಲ್ಲದೆ ಕಳೆದ ವರ್ಷ ಕೋವಿಡ್ ಲಾಕ್ ಡೌನ್‌ನಿಂದ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯದೆ ಸಾಕಷ್ಟು ಜನ ಸಂಕಷ್ಷಕ್ಕೆ ಒಳಗಾಗಿದ್ದಾರೆ, ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ.

ಅಲ್ಲದೆ ಕರಾವಳಿ ಜಿಲ್ಲೆಗಳಲ್ಲಿ ದೈವದ ಕೋಲಗಳು ಮುಂಚಿತವಾಗಿ ನಿಗದಿಯಾಗಿರುತ್ತೆ. ನೈಟ್ ಕರ್ಫ್ಯೂ ಜಾರಿ ಆದ್ರೆ ರಾತ್ರಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ತೊಂದರೆ ಆಗುತ್ತದೆ. ಇನ್ನು ಉಡುಪಿಯಲ್ಲಿ ಎಂಐಟಿ ಹೊರತು ಪಡಿಸಿದ್ರೆ ಉಡುಪಿ ಮಣಿಪಾಲ್ ನಲ್ಲಿ ಯಾವುದೇ ಕೊರೊನಾದ ಆತಂಕ ಇಲ್ಲ.
ಎಂಐಟಿಯಲ್ಲಿ ಕಂಟೋನ್ಮೆಂಟ್ ಜೋನ್ ಮಾಡಿ ಪಾಸಿಟಿವ್ ರೇಟ್ ಕಡಿಮೆ ಆಗಿದೆ. ಸದ್ಯ ಜಿಲ್ಲೆಯಲ್ಲಿ ಕೇವಲ 400 ಮಾತ್ರ ಸಕ್ರೀಯ ಪ್ರಕರಣ ಇದ್ದು ಅದರಲ್ಲಿ ಕೇವಲ 59 ಮಂದಿ ಆಸ್ಪತ್ರೆಯಲ್ಲಿ ಇದ್ದಾರೆ ಅಲ್ಲದೆ ಅವರಲ್ಲಿ ಯಾರೊಬ್ಬರ ಆರೋಗ್ಯ ಸ್ಥಿತಿ ಗಂಭೀರ ಇಲ್ಲ, ಡೆತ್ ರೇಟ್ ಕೂಡ ಕಡಿಮೆ ಇದೆ ಎಂದು ಹೇಳಿದರು. ಅಲ್ಲದೆ ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ ಎರಡೂವರೆ ಸಾವಿರ ಟೆಸ್ಟ್ ಮಾಡುತ್ತಿದ್ದೇವೆ ಕೇವಲ 50 ರಿಂದ 60 ಪಾಸಿಟಿವ್ ಬರುತ್ತಿದೆ. ಹೀಗಾಗಿ ನೈಟ್ ಕರ್ಪ್ಯೂ ಜಾರಿ ಮಾಡದೇ, ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡಿ ಎಂದು ಉಡುಪಿ ಶಾಸಕ ರಘುಪತಿ ಭಟ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.