Connect with us

LATEST NEWS

ನಾಳೆಯಿಂದ ಉಡುಪಿ ಮಣಿಪಾಲದಲ್ಲಿ ನೈಟ್ ಕರ್ಪ್ಯೂ.. ಆರ್ಥಿಕ ಚಟುವಟಿಕೆ ಸೇರಿದಂತೆ ಎಲ್ಲಾ ಚಟುವಟಿಕೆ‌ಗೆ ನಿರ್ಬಂಧ

ಉಡುಪಿ ಎಪ್ರಿಲ್ 9: ನಾಳೆಯಿಂದ ರಾತ್ರಿ 10 ರಿಂದ ಬೆಳಿಗ್ಗೆ 5ರಗ ವರೆಗೆ ಉಡುಪಿ ಮಣಿಪಾಲದಲ್ಲಿ ಕೊರೋನಾ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ಸಂದರ್ಭ ಆರ್ಥಿಕ ಚಟುವಟಿಕೆ ಸೇರಿದಂತೆ ಎಲ್ಲಾ ರೀತಿಯ ಜನ ಸಂಚಾರಕ್ಕೆ ನಿರ್ಬಂಧ ಇರಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.


ಈ ಕುರಿತಂತೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನಾಳೆ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 5ರವರೆಗೆ ಕೊರೋನಾ ಕರ್ಪ್ಯೂ ಜಾರಿಯಲ್ಲಿರಲಿದ್ದು, ಎಪ್ರಿಲ್ 20 ರವರೆಗೆ ಈ ಕರ್ಪ್ಯೂ ಜಾರಿಯಲ್ಲಿರುತ್ತದೆ. ಈ ಸಂದರ್ಭ ವೈದ್ಯಕೀಯ ಸೇವೆ ಹೊರತುಪಡಿಸಿ ಎಲ್ಲಾ ಆರ್ಥಿಕ ಚಟುವಟಿಕೆಗೆ ನಿರ್ಬಂಧವಿದ್ದು, ಕಾಯಿಲೆಯಿಂದ ಬಳಲುವವರಿಗೆ ಮತ್ತು ಅವರ ಸಹಾಯಕರಿಗೆ ಮಾತ್ರ ಸಂಚರಿಸಲು ಅವಕಾಶವಿದೆ.

 

ಕಂಪೆನಿ ಫ್ಯಾಕ್ಟರಿ ಕೆಲಸಕ್ಕೆ ಹೋಗುವವರು 10ರ ಮೊದಲು ಹೋಗಿ 5ಗಂಟೆ ನಂತರ ಹೊರಬರಬೇಕು, ಯಾವುದಾದರೂ ಇ- ಕಾಮರ್ಸ್ ಹಾಗೂ ಹೋಂ ಡೆಲಿವರಿ ಇರುವವರು ಡೆಲಿವರಿ ಕೊಟ್ಟು ಬರಬಹುದು. ರೈಲು, ಬಸ್ ಮೂಲಕ ದೂರ ಪ್ರಯಾಣಕ್ಕೆ ಹೋಗುವವರು ಟಿಕೆಟ್ ಇಟ್ಟುಕೊಂಡು ಸಂಚರಿಸಬಹುದು, ಅಲ್ಲದೆ ಆಟೋ ಕ್ಯಾಬ್ ನಲ್ಲಷ್ಟೆ  ನಿಲ್ದಾಣಗಳಿಗೆ ಹೋಗಬೇಕು ಎಂದರು.