LATEST NEWS
ಶಾಸಕಾಂಗ ಸಭೆ ಕರೆಯಲು ಉಡುಪಿ ಶಾಸಕ ರಘುಪತಿ ಭಟ್ ಒತ್ತಾಯ
ಉಡುಪಿ ಜುಲೈ 19: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿವಾದಾಸ್ಪದ ಆಡಿಯೋ ವಿಚಾರ ಸಂಬಂಧಿಸಿದಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದು, ಸ್ವತಃ ನಳಿನ್ ಕುಮಾರ್ ಅವರೇ ಆಡಿಯೋದಲ್ಲಿ ಧ್ವನಿ ನನ್ನದಲ್ಲ ಎಂದು ಹೇಳಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು.
ಉಡುಪಿಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಡಿಯೋ ನನ್ನದಲ್ಲ ಎಂದು ನಳಿನ್ ಸ್ಪಷ್ಟವಾಗಿ ಹೇಳಿದ್ದಾರೆ. ರಾಜ್ಯದ್ಯಕ್ಷರೇ ಈ ಬಗ್ಗೆ ಸಿಎಂಗೆ ಸ್ಪಷ್ಟಪಡಿಸಿದ್ದು, ಮುಖ್ಯಮಂತ್ರಿಗಳಿಗೆ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಅವರೇ ನಾನಲ್ಲ ಅಂದ ಮೇಲೆ, ಅದರಲ್ಲಿರುವುದು ನಳಿನ್ ಧ್ವನಿಯೇ ಅಲ್ಲ ಎಂದು ಭಾವಿಸಿದ್ದೇವೆ. ಒಂದು ವೇಳೆ ನಳಿನ್ ಅದು ತಮ್ಮದೇ ಧ್ವನಿ ಎಂದಿದ್ದರೆ ರಾಜ್ಯದಲ್ಲಿ ಸಂಚಲನ ವಾಗುತ್ತಿತ್ತು ಎಂದರು.
ಇನ್ನು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ವತಹ ನಳಿನ್ ಹೇಳಿದ್ದಾರೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ, ಶೆಟ್ಟರ್ ಮತ್ತು ಈಶ್ವರಪ್ಪ ಇಬ್ಬರೂ ನಮ್ಮ ಪಕ್ಷದ ಪ್ರಮುಖ ನಾಯಕರು, ಇಬ್ಬರು ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದವರು. ಅವರ ಹೆಸರು ಪ್ರಸ್ತಾಪವಾಗಿರುವುದು ರಿಂದ ಈ ಆಡಿಯೋ ಸುಳ್ಳು ಅನ್ನೋದು ಸಾಬೀತಾಗುತ್ತದೆ. ಇಬ್ಬರೂ ಕೂಡ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಕರೆದಿರುವ ಶಾಸಕಾಂಗ ಸಭೆಯ ಬಗ್ಗೆ ಇನ್ನೂ ಅಧಿಕೃತವಾಗಿ ಆಹ್ವಾನ ಬಂದಿಲ್ಲ, ಶಾಸಕಾಂಗ ಸಭೆ ಕರೆಯಬೇಕೆಂದು ಶಾಸಕನಾಗಿ ನಾನು ಒತ್ತಾಯಿಸುತ್ತೇನೆ. ನಾಯಕತ್ವದ ಬದಲಾವಣೆ ಸಲುವಾಗಿ ನನ್ನ ಬೇಡಿಕೆ ಅಲ್ಲ
ಪಕ್ಷದ ಇಮೇಜ್ ಹೆಚ್ಚಿಸುವ ದೃಷ್ಟಿಯಿಂದ ಸಭೆ ಮಾಡಬೇಕು, ಅಧಿವೇಶನಕ್ಕೂ ಮುನ್ನ ಶಾಸಕರ ಸಭೆ ಕರೆಯುವುದು ಸಂಪ್ರದಾಯ, ಶಾಸಕರ ಅಭಿಪ್ರಾಯ ತೆಗೆದುಕೊಂಡು ಅಧಿವೇಶನ ಆರಂಭಿಸುವುದು ಒಳ್ಳೆಯದು ಎಂದರು.