Connect with us

LATEST NEWS

ದೈವದ ಪವಾಡ 28 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗ ಮರಳಿ ಮನೆಗೆ

ಉಡುಪಿ ಡಿಸೆಂಬರ್ 16: ತುಳುನಾಡಿನ ದೈವಗಳ ಪವಾಡಕ್ಕೆ ಇದೀಗ ಮತ್ತೊಂದು ಘಟನೆ ಸೇರಿಕೊಂಡಿದೆ. 28 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಮಗ ಮತ್ತೆ ಮನೆ ಸೇರಿದ್ದಾನೆ. ನಂಬದ ದೈವದ ಮಾತು ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ಮಗ ಮತ್ತೆ ತನ್ನ ತಂದೆತಾಯಿ ಜೊತೆ ಸೇರಿಕೊಂಡಿದ್ದಾನೆ.

ಈ ಘಟನೆ ನಡೆದಿರುವುದು ಹೆಬ್ರಿ ತಾಲೂಕಿನ ವರಂಗ ಗ್ರಾಮದ ಹೊಸಬೆಟ್ಟು ಎಂಬಲ್ಲಿ. ಇಲ್ಲಿನ ಸುಮಾರು 6 ದಶಕಗಳಿಂದ ದೈವದ ಚಾಕರಿ ಮಾಡುತ್ತಿರುವ ಸುಂದರ ಪೂಜಾರಿ (80) ಅವರ ಮಗ ಭೋಜ 28 ವರ್ಷಗಳ ನಂತರ ಮರಳಿ ಮನೆಗೆ ಬಂದಿದ್ದಾರೆ. ಅಂದು ಯಾವುದೋ ಕಾರಣಕ್ಕೆ ಮುನಿದು ಮನೆ ಬಿಟ್ಟಿದ್ದ ಮಗನ ಬಗ್ಗೆ ಸುಂದರ ಪೂಜಾರಿ ಮತ್ತವರ ಪತ್ನಿ ಸುಶೀಲ ನಿತ್ಯವೂ ಮಗ ಇಂದು ಬರುತ್ತಾನೆ ನಾಳೆ ಬರುತ್ತಾನೆ ಎಂದು ಕಾಯುತ್ತಿದ್ದರು. ಆದರೆ ಮಗ ಎಲ್ಲಿದ್ದಾನೆ ಏನು ಮಾಡುತ್ತಿದ್ದಾನೆ ಎಂದು ಬರುತ್ತಾನೆ ಎಂಬ ಸುಳಿವೇ ಇರಲಿಲ್ಲ. ಮಗನನ್ನು ಸಾಯುವ ಒಳಗೆ ಒಂದು ಸಲ ಆದರೂ ನೋಡಿ ಕಣ್ಣುಮುಚ್ಚತ್ತೇವೆ ಎಂಬ ಭರವಸೆಯಲ್ಲಿ ತಾವು ನಂಬಿದ ದೈವಗಳಿಗೆ ಕೈಮುಗಿದಿದ್ದಾರೆ. ಅಲ್ಲದೆ ಕಳೆದ ವರ್ಷ ಬ್ರಹ್ಮಬೈದರ್ಕಳ ಕೋಲದ ಸಂದರ್ಭದಲ್ಲಿ ದೈವದಲ್ಲಿ ನಿವೇದಿಸಿಕೊಂಡಿದ್ದರು.

 

ದೈವವು ವರ್ಷದೊಳಗೆ ಮಗನ ಮುಖ ನೋಡುವಂತೆ ಮಾಡುತ್ತೇನೆ ಎಂದು ಅಭಯ ನೀಡಿತ್ತು. ದೈವದ ಅಭಯದಂತೆ ಅದೇ ವೇಳೆ ಉಡುಪಿ ಕಂಡೀರಾ ಖ್ಯಾತಿಯ ಮಂಜುನಾಥ ಕಾಮತ್ ಅವರು, ಈ ಹೆತ್ತವರ ಇಳಿವಯಸ್ಸಿನ ನೋವನ್ನು ಫೇಸ್ಟುಕ್ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದರು. ವೃದ್ಧ ದಂಪತಿಗಳ ಕಣ್ಣೀರನ್ನು ನೋಡಿದ ಹುಬಳ್ಳಿಯಲ್ಲಿ ತನ್ನಪಾಡಿಗೆ ತಾನು ಹೊಟೇಲ್ ಕಾರ್ಮಿಕನಾಗಿದ್ದ ಭೋಜ ಅವರ ಮನ ಕರಗಿತು. ಹೊರಟು ಊರಿಗೆ ಬಂದರು, ಹೆತ್ತವರ ಕಾಲಿಗೆ ಬಿದ್ದರು. ಬಾಲ್ಯದಿಂದಲೇ ಮಗನ ಕೈಯ ಮೇಲಿದ್ದ ಗುಳ್ಳೆಯನ್ನು ನೋಡಿ ಆತನೇ ತಮ್ಮ ಮಗ ಎಂದು ಖಚಿತಪಟ್ಟುಕೊಂಡು ಸುಂದರ ಪೂಜಾರಿ ಮತ್ತವರ ಪತ್ನಿ ದೈವಕ್ಕೆ ಬಾರಿಬಾರಿ ಕೈ ಮುಗಿದರು.

ಆ ದಿನ ಮನೆಯಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ. ಇದಾಗಿ ನಾಲೈದು ದಿನಗಳ ಭೋಜ ಮತ್ತೆ ಹುಬ್ಬಳ್ಳಿಗೆ ತೆರಳಿದರು. ವಾರ ಕಳೆಯುವಷ್ಟರಲ್ಲಿ ಮಗನನ್ನು ಕೊನೆಯ ಬಾರಿ ನೋಡುವುದಕ್ಕಾಗಿಯೇ ಕಾಯುತ್ತಿದ್ದವರಂತೆ ತಾಯಿ ಸುಶೀಲ ಅನಾರೋಗ್ಯ ಹಾಸಿಗೆ ಹಿಡಿದು ಎರಡು ವಾರಗಳ ಹಿಂದೆ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದು ಮತ್ತೆ ಓಡಿ ಬಂದ ಭೋಜ ತಾಯಿಯ ಅಂತ್ಯ ಸಂಸ್ಕಾರವನ್ನು ಮುಗಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *