ಉಡುಪಿಯ ಎಲ್ಲಾ ನಾಲ್ಕು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ
ಉಡುಪಿ ಸೆಪ್ಟೆಂಬರ್ 3 – ಉಡುಪಿ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಲ್ಕರಲ್ಲು ಗೆಲವನ್ನು ಸಾಧಿಸುವ ಮೂಲಕ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ.
ಆಗಸ್ಟ್ 31ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ನಾಲ್ಕರಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇಂದು ನಡೆದ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಉಡುಪಿ ನಗರಸಭೆ, ಕುಂದಾಪುರ ಹಾಗೂ ಕಾರ್ಕಳ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಉಡುಪಿ ನಗರಸಭೆ
ಬಿಜೆಪಿ 31
ಕಾಂಗ್ರೆಸ್ 4
ಕಾರ್ಕಳ ಪುರಸಭೆ
ಕಾಂಗ್ರೆಸ್ 11
ಬಿಜೆಪಿ 11
ಪಕ್ಷೇತರ 1
ಕುಂದಾಪುರ ಪುರಸಭೆ
ಬಿಜೆಪಿ 14
ಕಾಂಗ್ರೆಸ್ 8
ಪಕ್ಷೇತರ 1
ಸಾಲಿಗ್ರಾಮ ಪಟ್ಟಣ ಪಂಚಾಯತ್
ಪಕ್ಷೇತರ 1
ಕಾಂಗ್ರೆಸ್ 5
ಬಿಜೆಪಿ 10