LATEST NEWS
ಅಂಬ್ಯುಲೆನ್ಸ್ ಗೆ ಸೈಡ್ ಬಿಡದೇ ಸತಾಯಿಸಿದ ಕ್ಯಾಬ್ ಡ್ರೈವರ್
ಅಂಬ್ಯುಲೆನ್ಸ್ ಗೆ ಸೈಡ್ ಬಿಡದೇ ಸತಾಯಿಸಿದ ಕ್ಯಾಬ್ ಡ್ರೈವರ್
ಮಂಗಳೂರು ಸೆಪ್ಟೆಂಬರ್ 2: ರಸ್ತೆಯಲ್ಲಿ ವಾಹನಗಳಿಗೆ ಸೈಡ್ ಬಿಡದೇ ಸತಾಯಿಸುವ ವಾಹನ ಚಾಲಕರು ಇದ್ದಾರೆ. ಆದರೆ ಆ್ಯಂಬುಲೆನ್ಸ್’ಗೆ ದಾರಿ ಬಿಡದೆ ಅಮಾನವೀಯ ವರ್ತನೆಯನ್ನು ಇಲ್ಲೊಬ್ಬ ಕಾರಿನ ಡ್ರೈವರ್ ತೊರಿದ್ದಾನೆ.
ರೋಗಿಯೊಬ್ಬರನ್ನೂ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ವೊಂದು ಬಿಸಿ ರಸ್ತೆಯಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೋಗಿಯೊಬ್ಬರನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ವೊಂದು ವೇಗವಾಗಿ ಸಾಗುತ್ತಿತ್ತು. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಟ್ಯಾಕ್ಸಿ ಕೆಎ17ಎಸಿ2847ಯೊಂದನ್ನು ಓವರ್ ಟೇಕ್ ಮಾಡಲು ಚಾಲಕ ಮುಂದಾಗಿದ್ದಾನೆ. ಆ್ಯಂಬುಲೆನ್ಸ್ ಶಬ್ಧ ಮಾಡಿದ್ದರೂ ಕ್ಯಾಬ್ ಚಾಲಕ ದಾರಿ ಮಾಡಿಕೊಟ್ಟಿಲ್ಲ. ಪದೇ ಪದೇ ಆ್ಯಂಬುಲೆನ್ಸ್ ದಾರಿ ಮಾಡಿಕೊಡದೆ ದರ್ಪ ತೋರಿದ್ದಾನೆ. ಸುಮಾರು 10 ಕಿ.ಮೀವರೆಗೆ ದಾರಿ ಬಿಡದೆ ಸತಾಯಿಸಿದ್ದಾನೆ. ಘಟನೆಯ ವಿಡಿಯೋವನ್ನು ಆ್ಯಂಬುಲೆನ್ಸ್ ಚಾಲಕ ವಿಡಿಯೋ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಇದೀಗ ಚಾಲಕನನ್ನು ಗುರ್ತಿಸಿದ್ದು, ಚಾಲಕ ಸುರತ್ಕಲ್ ನಲ್ಲಿರುವುದಾಗಿ ತಿಳಿದುಬಂದಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
You must be logged in to post a comment Login