LATEST NEWS
ಉಡುಪಿ ಮಠದಲ್ಲಿ ಪಂಕ್ತಿ ಭೋಜನ ಹೆಸರಲ್ಲಿ ಜಾತಿನಿಂದನೆ ಕ್ರಿಮಿಲ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪಂಕ್ತಿ ಭೋಜನ ಹೆಸರಲ್ಲಿ ಜಾತಿನಿಂದನೆ ಮಾಡಲಾಗಿದೆ ಎಂದು ಮಹಿಳೆಯೊಬ್ಬರು 2014 ರಲ್ಲಿ ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
ವನಿತಾ ಶೆಟ್ಟಿ ಎಂಬವರು ನೀಡಿದ್ದ ಪ್ರಕರಣವನ್ನು ರದ್ದು ಮಾಡಲು ಕೋರಿ ಕೃಷ್ಣಮಠದ ಭೋಜನ ಶಾಲೆಯ ಸಿಬ್ಬಂದಿ ಶಂಕರಭಟ್ಟ ಅರ್ಜಿ ಸಲ್ಲಿಸಿದ್ದರು . ಈ ಅರ್ಜಿಯ ಕುರಿತು ವಿಚಾರಣೆ ನಡೆಸಿ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಪ್ರಕರಣದಲ್ಲಿ ಮೂಲ ದೂರುದಾರರು ಆರೋಪಿಸಿರುವಂತೆ ಯಾವುದೇ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ.

ಮಠದಲ್ಲಿ ಕೆಲವೊಂದು ಸಂಪ್ರದಾಯ ಹಾಗೂ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತದೆ. ಆದ್ದರಿಂದ ಆ ದೂರಿನ ಕುರಿತು ವಿಚಾರಣೆ ಅಗತ್ಯವಿಲ್ಲ ಎಂದು ರದ್ದುಗೊಳಿಸಿದೆ. ದೂರುದಾರರು ಸ್ಥಳೀಯ ಮಹಿಳೆಯಾಗಿದ್ದು ಅವರಿಗೆ ಮಠದ ನೀತಿನಿಯಮಗಳು ತಿಳಿದಿವೆ ಬ್ರಾಹ್ಮಣರಿಗೆ ಮೀಸಲಿದ್ದ ಜಾಗದಲ್ಲಿ ಅವರು ಭೋಜನಕ್ಕೆ ಕುಳಿತಿದ್ದರು. ಆಗ ಅವರ ಮನವೊಲಿಸಿ ಸಾಮಾನ್ಯ ಭೋಜನಶಾಲೆಗೆ ಕಳುಹಿಸಲಾಯಿತು. ಇದರಲ್ಲಿ ಯಾವುದೇ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಶಂಕರ ಭಟ್ಟ ಪರ ವಕೀಲರು ವಾದ ಮಂಡಿಸಿದ್ದರು.