LATEST NEWS
ಉಡುಪಿ : ಬೈಕ್ ಬುಲೆಟ್ ಮುಖಾಮುಖಿ ಢಿಕ್ಕಿ,ಬೈಕ್ ಸವಾರ ಮೃತ್ಯು..!

ಕುಂದಾಪುರ: ಬೈಕ್ ಹಾಗೂ ಬುಲೆಟ್ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಕುಂದಾಪುರ ನಗರ ಸಮೀಪದ ಹಂಗಳೂರಿನ ನಗು ಪ್ಯಾಲೇಸ್ ಎದುರುಗಡೆಯ ಸರ್ವೀಸ್ ರಸ್ತೆಯಲ್ಲಿ ರಾತ್ರಿ 11.00 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.

ಮೃತ ದುರ್ದೈವಿಯನ್ನು ಕುಂದಾಪುರ ನಗರದ ಬರೆಕಟ್ಟುವಿನ ಬಾಳೆಹಿತ್ಲು ನಿವಾಸಿಯಾದ ಪೈಂಟರ್ ವೆಂಕಟೇಶ್ ಇವರ ಪುತ್ರ ಶಶಾಂಕ್ ಮೊಗವೀರ (22ವರ್ಷ) ಎಂದು ಗುರುತಿಸಲಾಗಿದೆ.
ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ ಮೊಗವೀರ ರಾತ್ರಿ 11.00 ರ ವೇಳೆಗೆ ರಿಲಯನ್ಸ್ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮನೆಗೆ ಹಿಂತಿರುಗುವ ಸಮಯದಲ್ಲಿ ಅಪಘಾತವಾಗಿದ್ದು ತಕ್ಷಣ ಅವರನ್ನು ಮಣಿಪಾಲದ ಕೆಏಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ಅವರು ಕೊನೆರುಸಿರೆಳೆದಿದ್ದಾರೆ.
ಬಲೆಟ್ ಸವಾರ ಮತ್ತು ಹಿಂದೆ ಕುಳಿತಿದ್ದ ಮಹಿಳೆಯೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರನ್ನು ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿದೆ.
Continue Reading