LATEST NEWS
ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ
ಉಡುಪಿ ನವೆಂಬರ್ 09: ಸದ್ಯ ಟ್ರೆಂಡಿಂಗ್ ನಲ್ಲಿರುವ ಸ್ಯಾಂಡಲ್ ವುಡ್ ಹೊಸ ಜೋಡಿ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಕಾಣಿಯೂರು ಮಠಾಧೀಶರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
ಎಲ್ಲರೂ ಆಶ್ಚರ್ಯ ಪಡುವಂತೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಚಿತ್ರರಂಗದ ಜೋಡಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಕೃಷ್ಣ ಮಠದ ಕನಕ ನವಗ್ರಹ ಕಿಂಡಿ ಮೂಲಕ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದರು.
ಬಳಿಕ ಕೃಷ್ಣ ಮಠದ ರಥಬೀದಿಯಲ್ಲಿ ಇರುವ ಕಾಣಿಯೂರು ಮಠಕ್ಕೆ ಭೇಟಿ ನೀಡಿ, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಈ ವೇಳೆ ಕಾಣಿಯೂರು ಶ್ರೀಗಳು ನವ ಜೋಡಿಯನ್ನು ಮಠದ ವತಿಯಿಂದ ಗೌರವ ಸಲ್ಲಿಸಿದರು.
You must be logged in to post a comment Login