Connect with us

LATEST NEWS

ಮನೆ ಮಾಲೀಕನನ್ನು ಬಿಟ್ಟು ಕೆಲಸದಾಕೆಯ ಜೊತೆ ಬಸ್​ ಹತ್ತಿದ ನಾಯಿ

ಉಡುಪಿ ಮೇ 26: ತನ್ನನ್ನು ದಿನಾ ಆರೈಕೆ ಮಾಡುವ ಮನೆಯ ಕೆಲಸದವಳ ಜೊತೆಯೇ ನಾಯಿಯೊಂದು ಬಸ್ ನಲ್ಲಿ ಹತ್ತಿ ಮನೆಗೆ ಹೊರಟ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

ಉಡುಪಿ ಅಮ್ಮುಂಜೆಯ ಸರಸ್ವತಿ ನಗರದಲ್ಲಿ‌ ಮನೆ ಕೆಲಸದಾಕೆಯ ಪ್ರೀತಿಯ ಆರೈಕೆಗೆ ಶ್ವಾನ ಮನಸೋತು ಆಕೆಯೊಂದಿಗೆ ತೆರಳಲು‌ ನಿರ್ಧರಿಸಿದೆ. ಅದರಂತೆ ಮಹಿಳೆಯೊಂದಿಗೆ ಬಸ್ ನಿಲ್ದಾಣದವರೆಗೂ ತೆರಳಿದ್ದು, ಬಸ್ ಬರುತ್ತಿದ್ದಂತೆ ಮಹಿಳೆಯೊಂದಿಗೆ ಬಸ್ ಏರಿದೆ.

ಬಸ್ ನಿರ್ವಾಹಕ ಶ್ವಾನವನ್ನು ಇಳಿಸಲು ಎಷ್ಟೇ‌ ಪ್ರಯತ್ನ ಪಟ್ಟರೂ ಶ್ವಾನ ಮಾತ್ರ ಬಸ್​ನಿಂದ ಕೆಳಗೆ ಇಳಿಯದೇ ಮನೆ ಕೆಲಸದಾಕೆಯ ಜೊತೆ ನಿಂತುಕೊಂಡಿದೆ. ಬಳಿಕ ಸ್ವತಃ ಮನೆ ಕೆಲಸದ ಮಹಿಳೆಯೇ ಬಸ್​ನಿಂದ ಇಳಿದ ಕೂಡಲೇ ಶ್ವಾನ ಕೂಡ ಇಳಿದಿದೆ.
ಇದರಲ್ಲಿ ಮುಖ್ಯವಾಗಿ ಶ್ವಾನ ತನ್ನನ್ನು ಸಾಕಿದ ಮನೆಯ ಯಜಮಾನರನ್ನು ಬಿಟ್ಟು ತನ್ನ ಆರೈಕೆ ಮಾಡಿದ ಮಹಿಳೆಗೆ ತನ್ನ ಗೌರವ ನಿಯತ್ತನ್ನು ಪ್ರದರ್ಶಿಸುವ ಮೂಲಕ ತನ್ನ ನಿಷ್ಟಾವಂತೆಗೆ ಸಾಕ್ಷಿಯಾಯಿತು.

Advertisement
Click to comment

You must be logged in to post a comment Login

Leave a Reply