Connect with us

    LATEST NEWS

    ಉಡುಪಿ ­ : ಬೆಳಿಗ್ಗೆ 1.30 ವರೆಗೆ ಡಿಜೆ ಹಾಕಿ ಡ್ಯಾನ್ಸ್…ಮೆಹಂದಿ ಮನೆಗೆ ಪೊಲೀಸ್ ದಾಳಿ

    ಉಡುಪಿ ಫೆಬ್ರವರಿ 28: ಮೆಹೆಂದಿ ಕಾರ್ಯಕ್ರಮದ ಮಧ್ಯರಾತ್ರಿ ವೇಳೆ ಡಿ.ಜೆ ಸೌಂಡ್‌ ಹಾಕಿ ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದ ದೂರಿನ ಮೇಲೆ ದಾಳಿ ನಡೆಸಿದ ಪೊಲೀಸರು ಸೌಂಡ್‌ ಬಾಕ್ಸ್‌ ಸಹಿತ ಸ್ವತ್ತುಗಳನ್ನು ವಶಪಡಿಸಿಕೊಂಡ ಘಟನೆ ಉಡುಪಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಫೆಬ್ರವರಿ 26 ರಂದು ಶರತ್ ಎಂಬಾತನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ರಾತ್ರಿ 1.30 ರವರೆಗೂ ಡಿಜೆ ಸೌಂಡ್ ಹಾಕಿ ಸ್ಥಳೀಯರಿಗೆ ಕಿರಿಕಿರಿ ಮಾಡುತ್ತಿದ್ದರು. ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಡಿ.ಜೆ ಸೌಂಡ್ಸ್‌ ಹಾಕಿದ್ದು, ಸ್ಥಳೀಯರು ದೂರು ನೀಡಿದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಡಿಜೆ ಕಂಟ್ರೋಲರ್‌, ಲೈಟ್‌ ಕಂಟ್ರೋಲರ್‌, ಸೌಂಡ್‌ ಕಂಟ್ರೋಲರ್‌ ಹಾಗೂ ಕಪ್ಪು ಬಣ್ಣದ ಸೌಂಡ್‌ ಬಾಕ್ಸ್‌- 4 ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply