Connect with us

    LATEST NEWS

    ಲೋಕಸಭಾ ಚುನಾವಣೆ ವೆಬ್ ಕಾಸ್ಟಿಂಗ್ ಉಡುಪಿ 100% ಸಾಧನೆ

    ಲೋಕಸಭಾ ಚುನಾವಣೆ ವೆಬ್ ಕಾಸ್ಟಿಂಗ್ ಉಡುಪಿ 100% ಸಾಧನೆ

    ಉಡುಪಿ ಎಪ್ರಿಲ್ 20: ರಾಜ್ಯದಲ್ಲಿ ಏಪ್ರಿಲ್ 18 ರಂದು ನಡೆದ ಪ್ರಥಮ ಹಂತದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಜಿಲ್ಲೆಗಳ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಿದ್ದು , ಇದರಲ್ಲಿ ಉಡುಪಿ ಜಿಲ್ಲೆಯ ಒಟ್ಟು 54 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಲಾಗಿತ್ತು, ಇತರೆ ಜಿಲ್ಲೆಗಳಲ್ಲಿ ಅಳವಡಿಸಿದ್ದ ಎಲ್ಲಾ ವೆಬ್ ಕ್ಯಾಮೆರಗಳು ವಿವಿಧ ಕಾರಣಗಳಿಂದ ಸಮಪ್ಕ ಕಾರ್ಯ ನಿರ್ವಹಿಸಿಲ್ಲ , ಆದರೆ ಉಡುಪಿಯಲ್ಲಿ ಅಳವಡಿಸಿದ್ದ ಎಲ್ಲಾ ಕೆಮರಾಗಳು ಯಾವುದೇ ಅಡೆತಡೆಗಳಿಲ್ಲದೇ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಮೂಲಕ 14 ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆ 100% ಸಾಧನೆ ಮಾಡಿದ ಜಿಲ್ಲೆಯಾಗಿದೆ.

    ಜಿಲ್ಲೆಯ 54 ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನವನ್ನು ಪರಿಶೀಲಿಸಲು, ಈ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡದರೆ ಕೂಡಲೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ವೆಬ್ ಕ್ಯಾಮೆರಾ ಗಳನ್ನು ಅಳವಡಿಸಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಿದ್ದ ನಿಯಂತ್ರಣ ಕೊಠಡಿಯಲ್ಲಿ ಈ ಎಲ್ಲಾ ಮತಗಟ್ಟೆಗಳ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

    ಏಪ್ರಿಲ್ 18 ರಂದು ರಾಜ್ಯದ ವಿವಿಧ ಜಿಲ್ಲೆಗಳ ಮತಗಟ್ಟೆಗಳಲ್ಲಿ ಅಳವಡಿಸಿದ್ದ ವೆಬ್ ಕ್ಯಾಮೆರಾ ಗಳು ಮತ್ತು ಅವುಗಳ ಕಾರ್ಯ ನಿರ್ವಹಣೆ ಪರಿಶೀಲಿಸುವುದಾದರೆ, ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಳವಡಿಸಿದ್ದ 110 ವೆಬ್ ಕ್ಯಾಮೆರಾ ಗಳಲ್ಲಿ ಗರಿಷ್ಠ 104 ಕೆಮರಾಗಳು ಕಾರ್ಯ ನಿರ್ವಹಿಸಿವೆ,ಮೈಸೂರಿನ 179 ರಲ್ಲಿ 163 , ಚಿತ್ರದುರ್ಗದ 80 ರಲ್ಲಿ 66, ತುಮಕೂರಿನ 140 ರಲ್ಲಿ 131, ಮಂಡ್ಯದ 101 ರಲ್ಲಿ 89, ಬೆಂಗಳೂರು ಸೆಂಟ್ರಲ್ ನ 87 ರಲ್ಲಿ 69, ಬೆಂಗಳೂರು ಉತ್ತರದ 101 ರಲ್ಲಿ 95, ಕೋಲಾರದ 100 ರಲ್ಲಿ 86, ರಾಮನಗರದ 60 ರಲ್ಲಿ 59, ಬೆಂಗಳೂರು ದಕ್ಷಿಣದ 100 ರಲ್ಲಿ 91 , ಬೆಂಗಳೂರು ನಗರದ 100 ರಲ್ಲಿ 95 , ಹಾಸನದ 134 ರಲ್ಲಿ 129 , ಚಿಕ್ಕಬಳ್ಳಾಪುರದ 70 ರಲ್ಲಿ 69 ಕಾರ್ಯ ನಿರ್ವಹಿಸಿದ್ದು, ಉಡುಪಿಯಲ್ಲಿ 54 ರಲ್ಲಿ 54 ಕಾರ್ಯ ನಿರ್ವಹಿಸಿವೆ.

    ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರ ನಿರ್ದೇಶನದಂತೆ, ಏಪ್ರಿಲ್ 7 ರಿಂದಲೇ ವೆಬ್ ಕೆಮರಾ ಅಳಡಿಸಲು ಗುರುತಿಸಲಾಗಿದ್ದ 54 ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ವಿದ್ಯುತ್ ವ್ಯವಸ್ಥೆ, ಸಿಗ್ನಲ್ ದೊರೆಯುವ ಸ್ಥಳ ಇವುಗಳನ್ನು ಗುರುತಿಸಿದ್ದು, ಸಂಬಂದಪಟ್ಟ ಶಾಲೆಯ ಮುಖ್ಯಸ್ಥರು ಮತ್ತು ಗ್ರಾಮ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳಿಗೆ ಅಗತ್ಯವಿದ್ದ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿ, ಎಲ್ಲಾ ಮತಗಟ್ಟೆಗಳನ್ನು ವ್ಯವಸ್ಥಿತಗೊಳಿಸಲಾಗಿತ್ತು, ಮತ್ತು ಮತದಾನ ಹಿಂದಿನ ದಿನವೂ ಭೇಟಿ ನೀಡಿ, ಮತಗಟ್ಟೆ ಅಧಿಕಾರಿಗಳಿಗೆ ವಬ್ ಕೆಮರಾ ಅಳವಡಿಸಿದ ಪ್ಗಗ್ ನ್ನು ಯಾವುದೇ ಕಾರಣಕ್ಕೆ ಬದಲಾಯಿಸದಂತೆ ಹಾಗೂ ಸೂಕ್ತ ಸ್ಥಳದಲ್ಲಿ ಮತದಾನ ಸ್ಥಳ ನಿರ್ಮಾಣ ಮಾಡುವಂತೆ ಸೂಚಿಸಲಾಗಿತ್ತು ಎನ್ನುತ್ತಾರೆ, ಜಿಲ್ಲಾ ವೆಬ್ ಕಾಸ್ಟಿಂಗ್ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಸರ ಅಧಿಕಾರಿ ಡಾ. ಲಕ್ಷ್ಮಿಕಾಂತ್.
    ಏಪ್ರಿಲ್ 23 ರಂದು ನಡೆಯುವ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೂ ಸಹ 16 ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ ಕೆಮರಾಗಳನ್ನು ಅಳವಡಿಸಲಾಗುತ್ತಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *