ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ಪೋಲೀಸ್ ಕ್ರೌರ್ಯ, ಕಡಬ ಪೋಲೀಸಪ್ಪನ ವಿರುದ್ಧ ಭಾರೀ ಆಕ್ರೋಶ

ಪುತ್ತೂರು,ಎಪ್ರಿಲ್ 21: ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ಪೋಲೀಸ್ ಪೇದೆಯೊಬ್ಬ ಅಮಾನವೀಯವಾಗಿ ವರ್ತಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ‌.

ಕಡಬ ಜಾತ್ರೆಯ ಪ್ರಯುಕ್ತ ದೇವರ ಮೆರವಣಿಗೆ ಕಡಬ ಪೇಟೆಯ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಮಾನಸಿಕ ಅಸ್ವಸ್ಥ ವೃದ್ಧ ವ್ಯಕ್ತಿ ಯಾರಿಗೋ ಬೈಯುತ್ತ ಕೈಯಲ್ಲಿ ಕಲ್ಲು ಹಿಡಿದುಕೊಂದಿದ್ದ ಎನ್ನುವ ಕಾರಣಕ್ಕೆ ಆತನನ್ನು ಲಾಠಿ ಯಿಂದ ಹೊಡೆದು ಬಿರು ಬಿಸಿಲಿನಲ್ಲಿ ನೆಲಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವೃದ್ಧ ನ ಮೇಲೆ ಕ್ರೌರ್ಯ ಮೆರೆದ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಪಂಪಾಪತಿ ವಿರುಧ್ಧ ಆತನ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ವೃದ್ಧ ಹಾಗೂ ಮಾನಸಿಕ ಎನ್ನುವ ಸೌಜನ್ಯವನ್ನೂ ತೋರಿಸದ ಈ ಕಾನ್ಸ್ ಸ್ಟೇಬಲ್ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾಮಾಜಿಕ ಜಾಲತಾಣಿಗರಿಂದಲೂ ಕೇಳಿ ಬರಲಾರಂಭಿಸಿದೆ.

VIDEO