LATEST NEWS
ಬಾಂಬೆಯಲ್ಲಿ ಕುಳಿತು ಡಾನ್ ತರ ಮಾತನಾಡಿದರೆ ಸುಮ್ಮನಿರಲ್ಲ – ಉಡುಪಿ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್

ಬಾಂಬೆಯಲ್ಲಿ ಕುಳಿತು ಡಾನ್ ತರ ಮಾತನಾಡಿದರೆ ಸುಮ್ಮನಿರಲ್ಲ – ಉಡುಪಿ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್
ಉಡುಪಿ ಮೇ.22: ಉಡುಪಿ ಜಿಲ್ಲಾಡಳಿತದ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಗರಂ ಆದ ಘಟನೆ ಇಂದು ನಡೆದಿದೆ. ಜಿಲ್ಲಾಡಳಿತದ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಉಡುಪಿ ಡಿಸಿ ಕೆಂಡಮಂಡಲರಾಗಿದ್ದು, ಉಡುಪಿ ಜಿಲ್ಲಾಡಳಿತದ ಮುಂದೆ ನಿಮ್ಮ ಆಟ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದಿಷ್ಟು ಜನ ಕಿಡಿಗೇಡಿಗಳು ಫೋನ್ ಮಾಡಿ ರೆಕಾರ್ಡ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಅದೇನಿದ್ದರೂ ಇವತ್ತಿಗೆ ಕೊನೆಯಾಗಬೇಕು. ನಾಳೆಯಿಂದ ಯಾರಾದರೂ ಹಾಗೆ ಮಾಡಿದರೆ ಖಂಡಿತ ಅವರು ಜೈಲಲ್ಲಿ ಇರುತ್ತಾರೆ. ಬಹಳಷ್ಟು ಜನ ಬಾಂಬೆಯಲ್ಲಿ ಕುಳಿತು ಡಾನ್ ಥರ ಮಾತನಾಡುತ್ತಿದ್ದಾರೆ. ಆ ರೀತಿ ಯಾರಾದರೂ ಕಿಡಿಗೇಡಿಗಳು ಇದ್ದರೆ, ಅವರನ್ನು ಬಾಂಬೆಯಿಂದ ಹೇಗೆ ಕರ‍್ಕೊಂಡು ಬರಬೇಕು ಅನ್ನೋದು ಗೊತ್ತಿದೆ. ಅಂಥವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಇಲ್ಲಿ ಯಾರಾದರೂ ಅಂತಹ ವಿಡಿಯೋ, ಆಡಿಯೋ ಶೇರ್ ಮಾಡಿದರೆ ಅವರಿಗೂ ಶಿಕ್ಷೆ ಆಗುತ್ತೆ.

ನಾವು ಏನೂ ಕೆಲಸ ಮಾಡುತ್ತಿಲ್ಲ ಎಂಬ ರೀತಿ ಬಿಂಬಿಸುವ ಪ್ರಯತ್ನವಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಯ್ಯೋದು ಮಾಡಿದರೆ ನಿಮ್ಮ ಆಟ ನಡೆಯಲ್ಲ. ಅವನು ಎಷ್ಟೇ ದೊಡ್ಡ ಮನುಷ್ಯನಾದರೂ ಹಿಡಿದು ಜೈಲಿಗೆ ಹಾಕುತ್ತೇವೆ ಅಂತ ಎಚ್ಚರಿಕೆ ನೀಡಿದರು.
ನಾವು ಮೂರು ತಿಂಗಳಿನಿಂದ ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದೇವೆ. ಈ ಕಿಡಿಗೇಡಿಗಳು ಯಾರು ಏನು ಕೆಲಸ ಮಾಡುತ್ತಿಲ್ಲ ಅಂತ ಅಶಾಂತಿ ಹರಡುತ್ತಿದ್ದಾರೆ . ಕ್ವಾರಂಟೈನ್ ಸೆಂಟರ್ ಗಳಿಗೆ ಮನೆಯಿಂದ ಬಟ್ಟೆ ಕೊಡುತ್ತೇವೆ, ಊಟ ಕೊಡುತ್ತೇವೆ ಎಂದರೆ ಅದು ಸಾಧ್ಯವಿಲ್ಲ.
ಯಾವುದೇ ಕಾರಣಕ್ಕೂ ಕಂಟೈನ್ ಸೆಂಟರ್ಗೆ ಹೊರಗಿನ ವಸ್ತುಗಳನ್ನು ಕೊಡಲು ಅವಕಾಶವಿಲ್ಲ. ಕೊರಂಟೈನ್ ಸೆಂಟರಿನಿಂದ ಬಟ್ಟೆ ಊಟದ ಜೊತೆ ಕರೋನ ವೈರಸ್ ಬರುತ್ತೆ.ನಮಗೆ ನಮ್ಮ ಜಿಲ್ಲೆಯ 13 ಲಕ್ಷ ಜನರ ಆರೋಗ್ಯ ಮುಖ್ಯ. ನಮ್ಮ ಜನರಿಗೆ ಸೋಂಕು ಹಬ್ಬ ಬಾರದು ಎನ್ನುವುದೇ ಇಂಪಾರ್ಟೆಂಟ್ ಅಂತ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.