Connect with us

    KARNATAKA

    ಶ್ರೀಕೃಷ್ಣನ ನಾಡಲ್ಲಿ ವೈಭವದ ವಿಟ್ಲಪಿಂಡಿ ಉತ್ಸವಕ್ಕೆ ಕ್ಷಣಗಣನೆ,ಶೃಂಗಾರಗೊಂಡ ರಥಬೀದಿ..!

    ಕೃಷ್ಣನ ನಾಡು ಉಡುಪಿಯ ಬೀದಿ ಬೀದಿಗಳಲ್ಲೂ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಆಚರಣೆ, ತಯಾರಿ ಜೋರಾಗಿದ್ದು ಇಂದು ಅಪರಾಹ್ನ ನಡೆಯುವ ಅಷ್ಟಮಿ ವಿಟ್ಲಪಿಂಡಿ ಉತ್ಸವ( ಕೃಷ್ಣ ಲೀಲೋತ್ಸವ) ಕ್ಕೆ ಬೇಕಾದ ಸಿದ್ಧತೆಗಳು ಪೂರ್ಣಗೊಂಡಿದ್ದು ರಥ ಬೀದಿ ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ.

    ಉಡುಪಿ, ಆಗಸ್ಟ್ 27 : ಇಂದು ನಾಡಿನೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಸರು ಕುಡಿಕೆ ಉತ್ಸವ ವೈಭವದಿಂದ ನಡೆಯಲಿದೆ. ಕರಾವಳಿಲ್ಲೂ ಈ ಮೊಸರು ಕುಡಿಕೆ ಉತ್ಸವ ವೈಭವದಿಂದ ನಡೆಯಲು ಬೇಕಾದ ಸಿದ್ದತೆಗಳು ಭರದಿಂದ ಸಾಗಿವೆ.

    ಅತ್ತ ಕೃಷ್ಣನ ನಾಡು ಉಡುಪಿಯ ಬೀದಿ ಬೀದಿಗಳಲ್ಲೂ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಆಚರಣೆ, ತಯಾರಿ ಜೋರಾಗಿದ್ದು ಇಂದು ಅಪರಾಹ್ನ ನಡೆಯುವ ಅಷ್ಟಮಿ ವಿಟ್ಲಪಿಂಡಿ ಉತ್ಸವ( ಕೃಷ್ಣ ಲೀಲೋತ್ಸವ) ಕ್ಕೆ ಬೇಕಾದ ಸಿದ್ಧತೆಗಳು ಪೂರ್ಣಗೊಂಡಿದ್ದು ರಥ ಬೀದಿ ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ. ಬಣ್ಣಗಳ ನೀರನ್ನು ಹಾಕಿದ ಮಡಕೆಗಳನ್ನು ಎತ್ತರದಲ್ಲಿ ಕಟ್ಟಲಾಗಿದೆ. ಅದನ್ನು ಗೊಲ್ಲ ವೇಷಧಾರಿಗಳು ಅಪರಾಹ್ನ ಮೆರವಣೆಗೆಯಲ್ಲಿ ಬಂದು ಓಡೆಯುವ ಕಾರ್ಯಕ್ರಮವಿದೆ. ಕೃಷ್ಣಮಠದ ಪಾಕಶಾಲೆಯಲ್ಲಿ ಉಂಡೆಗಳು, ಚಕ್ಕುಲಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಿದ್ಧವಾಗಿದ್ದು. ಈ ಬಾರಿಯ ಅಷ್ಟಮಿಗೆ 3 ಲಕ್ಷ ಉಂಡೆ, 1.25 ಲಕ್ಷ ಚಕ್ಕುಲಿ ಕೃಷ್ಣನಿಗೆ ಸಮರ್ಪಣೆಯಾಗಿ ಭಕ್ತರಿಗೆ ವಿತರಣೆಯಾಗಲಿದೆ. ಮಠಕ್ಕೆ ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಬರುತ್ತಿದ್ದಾರೆ. ವಿಟ್ಲ ಪೀಮಡಿಯ ಪ್ರಮುಖ ಆಕರ್ಷಣೆ ಹುಲಿ ವೇಷ.

    ಅಷ್ಟಮಿ ದಿನ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದು ಬಳಿಕ ರಥಬೀದಿಯಲ್ಲಿ ಮತ್ತು ನಗರದಲ್ಲೆಡೆ ಸಂಚಾರ ಮಾಡಿ ಹುಲಿ ವೇಷಧಾರಿಗಳು ಜನರನ್ನು ರಂಜಿಸುತ್ತಾರೆ. ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ವಿವಿಧ ರಂಗೋಲಿಗಳನ್ನು ಹಾಕಲಾಗಿದೆ. ಭಕ್ತರಿಗೆ ಉಚಿತ ಹಾಲು ಪಾಯಸ ಊಟದ ವ್ಯವಸ್ಥೆ ಮಾಡಲಾಗಿದ್ದು, ಶ್ರೀ ಕೃಷ್ಣನ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಸಹ ಮಠದವರು ಕಲ್ಪಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply