LATEST NEWS
ಉಡುಪಿ: ಈಜಲು ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತ್ಯು..!
ಉಡುಪಿ: ಕೆರೆಗೆ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಉಡುಪಿ ಕರಂಬಳ್ಳಿಯಲ್ಲಿ ನಡೆದಿದೆ.
ಮೃತನನ್ನು ಇಂದ್ರಾಳಿ ನಿವಾಸಿ ಸಿದ್ದಾರ್ಥ್ ಶೆಟ್ಟಿ (17) ಎಂದು ಗುರುತಿಸಲಾಗಿದೆ. ಈತ ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿ. ಸಿದ್ದಾರ್ಥ್ ನಿನ್ನೆ ಇಬ್ಬರು ಸ್ನೇಹಿತರೊಂದಿಗೆ ಉಡುಪಿಯ ಕರಂಬಳಿ ಕೆರೆಗೆ ಈಜಲು ತೆರಳಿದ್ದನು. ಈ ವೇಳೆ ಈಜಲು ನೀರಿಗಿಳಿದಿದ್ದು, ಈಜಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನಿಬ್ಬರು ಸ್ನೇಹಿತರು ನೀರಿಗೆ ಇಳಿದಿರಲಿಲ್ಲ ಎಂಬ ಮಾಹಿತಿ ಲಭಿಸಿದೆ.