Connect with us

LATEST NEWS

ಉಡುಪಿ ಕೃಷ್ಣಾಷ್ಠಮಿ ವಿಶೇಷ : ಕೊರೊನಾ ಕಾಲದ ಸಂದೇಶ ಸಾರುವ ಕೋ – ವಿಧ ವೇಷ

ಉಡುಪಿ ಸೆಪ್ಟೆಂಬರ್ 11: ಕೊರೊನಾ ಮಾಹಾಮಾರಿಯ ಆರ್ಭಟ ಹಾಗೂ ಮಳೆಯ ಜೊತೆ ಈ ಬಾರಿಯ ಉಡುಪಿ ಕೃಷ್ಣ ಜನ್ಮಾಷ್ಠಮಿ ಸಂಭ್ರಮವಿಲ್ಲದೆ ಮುಗಿದು ಹೋಗಿದೆ. ರಥಬೀದಿಯಲ್ಲಿ ಜನಸಾಗರದ ನಡುವೆ ನಡೆಯುತ್ತಿದ್ದ ಕೃಷ್ಣ ಜನ್ಮಾಷ್ಠಿ ಸಂಭ್ರಮ. ಈ ಬಾರಿ ಖಾಲಿ ಖಾಲಿಯಾದ ರಥ ಬೀದಿಯಲ್ಲಿ ನಡೆದಿದೆ. ನೂರಾರು ಕಲಾವಿದರ ಬಣ್ಣ ಬಣ್ಣ ವೇಷದಿಂದ ತುಂಬಿ ತುಳುಕುತ್ತಿದ್ದ ಉಡುಪಿ ಈ ಬಾರಿ ಬೆರಳೆಣಿಕೆಯಲ್ಲಿ ಮಾತ್ರ ವೇಷಗಳು ಕಂಡು ಬಂದಿವೆ.


ಉಡುಪಿಯ ರಾಮಾಂಜಿ ಕೋ-ವಿಧ ಎಂಬ ವಿಭಿನ್ನ ಸಂದೇಶ ಸಾರುವ ವೇಷವನ್ನು ಧರಿಸಿ ಈ ಬಾರಿ ಗಮನ ಸೆಳೆದಿದ್ದಾರೆ. ಕೊರೊನಾ.. ಕೊರೋನ ಕಾಲ ಮತ್ತು ಕೊರೊನಾ ನಂತರ ಎಂಬ ಪರಿಕಲ್ಪನೆಯಲ್ಲಿ ವೇಷ ಮೂಡಿಬಂದಿತು. ಪ್ರತಿವರ್ಷ ವೇಷಹಾಕಿ ಧನಸಂಗ್ರಹ ಮಾಡಿ ಕಷ್ಟದಲ್ಲಿದ್ದವರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುತ್ತಿದ್ದರು. ಎಂಟನೇ ವರ್ಷದ ಈ ವೇಷವನ್ನು ಹರಕೆ ರೂಪದಲ್ಲಿ ದೇವರಿಗೆ ಸಮರ್ಪಿಸಿದ್ದಾರೆ. ಜೊತೆಗೆ ಕೊರೊನಾ ಕಾಲದ ಸಂದೇಶವನ್ನು ರವಾನಿಸಿದ್ದಾರೆ. ಉಪನ್ಯಾಸಕ, ಕಲಾವಿದ ಪ್ರಶಾಂತ್ ಉದ್ಯಾವರ ಮತ್ತು ತಂಡ ಪ್ರತಿವರ್ಷದಂತೆ ಈ ಬಾರಿಯೂ ವಿಭಿನ್ನ ವಿನ್ಯಾಸದ ಮೂಲಕ ವೇಷವನ್ನು ಸೆಳೆಯುವಂತ ಮಾಡಿದ್ದಾರೆ.


ಈ ಸಂದರ್ಭ ಮಾತನಾಡಿದ ಕಲಾವಿದ ರಾಮಾಂಜಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾಳಜಿಯಿಂದ ಕಳೆದ ಎಂಟು ವರ್ಷಗಳಿಂದ ವೇಷ ಹಾಕಿದ್ದೇನೆ. ಒಟ್ಟುಗೂಡಿದ ಹಣದಿಂದ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದೇನೆ. ಈ ಬಾರಿ ಇಡೀ ದೇಶವೇ ಸಂಕಷ್ಟದಲ್ಲಿದೆ. ಈ ಕಾಲದಲ್ಲಿ ಜನರು ಆರ್ಥಿಕವಾಗಿ ಸದೃಢವಾಗಿಲ್ಲ. ಆದರೆ ಎಂಟು ವರ್ಷಗಳಿಂದ ಮಾಡಿಕೊಂಡು ಬಂದ ಕಲಾಸೇವೆ ಎಂಬ ತಪಸ್ಸನ್ನು ಈ ಬಾರಿ ಬಿಡುವ ಮನಸ್ಸಾಗಲಿಲ್ಲ. ಹರಕೆಯ ರೂಪದಲ್ಲಿ ವೇಷವನ್ನು ಧರಿಸಿದ್ದೇನೆ. ಸುಮಾರು ಹತ್ತು ಸಾವಿರ ರೂಪಾಯಿ ಖರ್ಚಾಗಿದೆ.

ವಿನ್ಯಾಸಕ ಪ್ರಶಾಂತ್ ಉದ್ಯಾವರ ಮಾತನಾಡಿ, ಕೊರೊನಾ ಸಾಂಕ್ರಾಮಿಕಕ್ಕೆ ಇಡೀ ಜಗತ್ತೇ ತತ್ತರಿಸಿದೆ. ಉಡುಪಿ ಜಿಲ್ಲೆಯ ದೊಡ್ಡ ಹಬ್ಬ ಕೃಷ್ಣಜನ್ಮಾಷ್ಟಮಿ ತಮ್ಮ ಘಮವನ್ನೇ ಕಳೆದುಕೊಂಡಿದೆ. ಈಗ ಕೊರೊನಾ ಅಟ್ಟಹಾಸ ತೋರುತ್ತಿದೆ. ಆದರೆ ಪರಿಸ್ಥಿತಿ ಹೀಗೆ ಇರುವುದಿಲ್ಲ.

ಮಹಾಮಾರಿ ಪ್ಲೇಗ್ ಬಂದಾಗಲೂ ಜನರು ಸಾಕಷ್ಟು ಕಷ್ಟ ಪಟ್ಟಿದ್ದರು ಮುಂದೆ ಎಲ್ಲ ತೊಂದರೆಗಳು ನಿವಾರಣೆಯಾಗಲಿದೆ. ಇದನ್ನು ಕೋ- ವಿಧ ಎಂಬ ವೇಷದ ಮೂಲಕ ಜನತೆಯ ಮುಂದೆ ಇಟ್ಟಿದ್ದೇವೆ. ಕೊರೋನಾದ ನಂತರ ಒಂದು ಹೊಸ ಜಗತ್ತು ನಿರ್ಮಾಣ ಆಗುತ್ತದೆ ಇದನ್ನು ಕಲ್ಪಿಸಿ ವೇಷದ ವಿನ್ಯಾಸ ಮಾಡಿದ್ದೇವೆ ಎಂದು ಹೇಳಿದರು.

Video:

Share Information
Continue Reading
Advertisement
Click to comment

Leave a Reply

Your email address will not be published. Required fields are marked *