LATEST NEWS
ಡಿಕೆಶಿಗೆ ಬೆಳ್ಳಿಯ ಕಡ್ಸಲೆ ಉಡುಗೊರೆ – ಕಾಂಗ್ರೆಸ್ ನಾಯಕರ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ
ಉಡುಪಿ ಜುಲೈ 07: ಉಡುಪಿ ಪ್ರವಾಸದ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ದೈವಗಳ ಕಡ್ಸಲೆಯನ್ನು ಉಡುಗೊರೆಯಾಗಿ ಕೊಟ್ಟ ಉಡುಪಿ ಜಿಲ್ಲಾ ಕಾಂಗ್ರೆಸ್ ನಾಯಕರ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕಾರ್ಕಳ ಶಾಸಕ ಸುನಿಲ್ ಕುಮಾರ್ ತುಳುನಾಡಿದ ದೈವಾರಧನೆಯನ್ನು ರಾಜಕೀಯಕ್ಕೆ ಬಳಸಿರುವ ಕಾಂಗ್ರೇಸ್ ತುಳುನಾಡಿನ ಸಮಸ್ತರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಉಡುಪಿ ಪ್ರವಾಸಕ್ಕೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸ್ಥಳೀಯ ಕಾಂಗ್ರೇಸ್ ನಾಯಕರು ಉಡುಗೊರೆಯನ್ನು ನೀಡುವ ನೆಪದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ತುಳುನಾಡಿನ ದೈವಾರಾಧನೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಕಡ್ಸಲೆ ಆಯುಧವನ್ನು ಬೆಳ್ಳಿಯಲ್ಲಿ ಮಾಡಿಸಿ ಡಿಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ.
ಆದರೆ ತುಳುನಾಡಿನ ದೈವಾರಾಧನೆಯಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ಕಡ್ಸಲೆಯನ್ನು ದೈವಪಾತ್ರಿ ಗಳಲ್ಲದೆ ಬೇರೆ ಯಾರು ಈ ಆಯುಧವನ್ನು ಹಿಡಿಯುವಂತಿಲ್ಲ. ಈಗ ಕಡ್ಸಲೆ ನೀಡಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆಯಿಂದ ದೈವಾರಾಧಕ ರ ಭಾವನೆಗೆ ಧಕ್ಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶಾಸಕ ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದು ತುಳುನಾಡಿನ ದೈವಾರಾಧನಾ ಪದ್ಧತಿಗೆ ಕಾಂಗ್ರೆಸ್ ನಿಂದ ಅವಮಾನ. ದೈವದ ಕಡ್ಸಲೆ ಗೆ ತನ್ನದೇ ಶಕ್ತಿ ಹಾಗೂ ನಂಬಿಕೆಯಿದೆ. ಇದನ್ನು ರಾಜಕೀಯಕ್ಕೆ ಬಳಸಿರುವುದು ಅಕ್ಷಮ್ಯ ಅಪರಾಧ. ತುಳುನಾಡಿನ ಸಮಸ್ತರಲ್ಲಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು. ಎಂದು ಆಗ್ರಹಿಸಿದ್ದಾರೆ.
ತುಳುನಾಡಿನ ದೈವಾರಾಧನಾ ಪದ್ಧತಿಗೆ ಕಾಂಗ್ರೆಸ್ ನಿಂದ ಅವಮಾನ. ದೈವದ ಕಡ್ಸಲೆ ಗೆ ತನ್ನದೇ ಶಕ್ತಿ ಹಾಗೂ ನಂಬಿಕೆಯಿದೆ. ಇದನ್ನು ರಾಜಕೀಯಕ್ಕೆ ಬಳಸಿರುವುದು ಅಕ್ಷಮ್ಯ ಅಪರಾಧ.
ತುಳುನಾಡಿನ ಸಮಸ್ತರಲ್ಲಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು.@KPCCPresident @DKShivakumar @INCKarnataka pic.twitter.com/cssMSPJgS8— Sunil Kumar Karkala (@karkalasunil) July 7, 2021