LATEST NEWS
ಉಡುಪಿ – ಅನುಮತಿ ಇಲ್ಲದೆ ಜಾಥಾ ಎಸ್‌ಡಿಪಿಐ ನಾಯಕರ ವಿರುದ್ಧ ಪ್ರಕರಣ ದಾಖಲು
ಉಡುಪಿ ಡಿಸೆಂಬರ್ 11: ಪೊಲೀಸರ ಅನುಮತಿ ಇಲ್ಲದೆ ಹೆಜಮಾಡಿ ಟೋಲ್ ಗೇಟ್ ಬಳಿ ಮಂಗಳವಾರ ಚಲೋ ಬೆಳಗಾವಿ ಜಾಥಾ ನಡೆಸಿದ ಎಸ್ ಡಿಪಿಐ ಮುಖಂಡರ ವಿರುದ್ದ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.
ಅಕ್ರಮ ಗುಂಪುಗೂಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ತೊಂದರೆ ಮಾಡಿ ಕಾನೂನು ಉಲ್ಲಂಘಿಸಿದ ಆರೋಪ ದಡಿ ಎಸ್ ಡಿ ಪಿ ಐ ನಾಯಕರಾದ ರಿಯಾಝ್ ಕಡಂಬು, ಕಾಪುವಿನ ಹನೀಫ್ ಮೂಳೂರು, ನೂರುದ್ದೀನ್ ಮಲ್ಲಾರು, ಫಿರೋಝ್ ಕಂಚಿನಡ್ಕ, ತೌಫೀಕ್ ಉಚ್ಚಿಲ, ಮಜೀದ್ ಉಚ್ಚಿಲ, ಇಬ್ರಾಹಿಂ ಕಂಚಿನಡ್ಕ ಹಾಗೂ ಇತರರ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 159/2024 ಕಲಂ: 57,189(2),189(3), 281,285 ಜೊತೆಗೆ 190 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉಡುಪಿ ನಗರದಲ್ಲಿ ರಾಜ್ಯಮಟ್ಟದ ಜಾಥಾಗೆ ಚಾಲನೆ ನೀಡಲು ಎಸ್ ಡಿಪಿಐ ಯೋಜಿಸಿದ್ದು, ಆದರೆ ಉಡುಪಿ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದರು, ಆದರೆ ಎಸ್ ಡಿಪಿಐ ಮುಖಂಡರು ಮತ್ತು ಕಾರ್ಯಕರ್ತರು ನಗರದಿಂದ ಕಣ್ತಪ್ಪಿಸಿ ಜಿಲ್ಲೆಯ ಗಡಿ ಭಾಗದಲ್ಲಿ ಜಾಥಾಗೆ ಚಾಲನೆ ನೀಡಿದ್ದರು. “ಯೂಟರ್ನ್ ರಾಜ್ಯ ಸರಕಾರದ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ ಎಂಬ ಹೆಸರಿನಲ್ಲಿ ಜಾಥಾವನ್ನು ಹೆಜಮಾಡಿ ಟೋಲ್‌ಗೇಟ್ ಹೊರಟಿದ್ದರು. ಸುಮಾರು ನೂರಕ್ಕೂ ಅಧಿಕ ಕಾರ್ಯಕರ್ತರು ಈ ಜಾಥಾದಲ್ಲಿ ಭಾಗವಹಿಸಿದ್ದರು. ಜಾಥಾ ಗೆ ರಿಯಾಜ್ ಕಡುಂಬುಗೆ ಇತರ ಎಸ್ ಡಿ ಪಿ ಐ ನಾಯಕರ ಸಾಥ್ ನೀಡಿದ್ದರು. ಆದರೆ ಅನುಮತಿ ಇಲ್ಲದೆ ಜಾಥಾ ನಡೆಸಿರುವ ಕಾರಣಕ್ಕೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಗುಂಪುಗೂಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ತೊಂದರೆ ಮಾಡಿ ಕಾನೂನು ಉಲ್ಲಂಘಿಸಿದ ಆರೋಪ ದಡಿ ಎಸ್ ಡಿ ಪಿ ಐ ನಾಯಕರಾದ ರಿಯಾಝ್ ಕಡಂಬು, ಕಾಪುವಿನ ಹನೀಫ್ ಮೂಳೂರು, ನೂರುದ್ದೀನ್ ಮಲ್ಲಾರು, ಫಿರೋಝ್ ಕಂಚಿನಡ್ಕ, ತೌಫೀಕ್ ಉಚ್ಚಿಲ, ಮಜೀದ್ ಉಚ್ಚಿಲ, ಇಬ್ರಾಹಿಂ ಕಂಚಿನಡ್ಕ ಹಾಗೂ ಇತರರ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 159/2024 ಕಲಂ: 57,189(2),189(3), 281,285 ಜೊತೆಗೆ 190 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.