Connect with us

LATEST NEWS

ಕಾರು ಡಿಕ್ಕಿಯಾಗಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರ ಸಾವು

ಉಡುಪಿ ಡಿಸೆಂಬರ್ 26: ಬಸ್ ಗಾಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಕಾರು ಡಿಕ್ಕಿಯಾಗಿ ಇಬ್ಬರೂ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಸಮೀಪದ ಎರ್ಮಾಳಿನಲ್ಲಿ ನಿನ್ನೆ ನಡೆದಿದೆ. ಮೃತರನ್ನು ಎರ್ಮಾಳ್ ನಿವಾಸಿ ಸಂಜೀವ ದೇವಾಡಿಗ (45) ಮತ್ತು ಉತ್ತರ ಪ್ರದೇಶ ಮೂಲದ ಅರವಿಂದ್ (22) ಎಂದು ಗುರುತಿಸಲಾಗಿದೆ.

ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಮಾರುತಿ ಅಲ್ಟೋ ಕಾರು ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳ್ ಸರಕಾರಿ ಶಾಲೆ ಮುಂಭಾಗದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.