LATEST NEWS
ಉಡುಪಿ – ಟಿಕೆಟ್ ದರ ಏರಿಕೆಯೊಂದಿಗೆ ಜುಲೈ 1 ರಿಂದ ಖಾಸಗಿ ಬಸ್ ಸಂಚಾರ ಆರಂಭ
ಉಡುಪಿ ಜುಲೈ 25: ಉಡುಪಿ ಜಿಲ್ಲೆಯಲ್ಲಿ ಜುಲೈ 1 ರಿಂದ ಶೇಕಡ 25 ರ ಟಿಕೆಟ್ ದರ ಏರಿಕೆಯೊಂದಿಗೆ ಸಿಟಿ ಬಸ್ ಸಂಚಾರ ಆರಂಭಿಸಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ಮಾಲೀಕರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸಭೆ ನಡೆದಿದ್ದು, ಜುಲೈ 1 ರಿಂದ ಬಸ್ ಸಂಚಾರ ನಡೆಸಲು ಮಾಲಕರು ಒಪ್ಪಿಗೆ ಸೂಚಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಉಡುಪಿ ಸಿಟಿ ಬಸ್ ಮಾಲಿಕರ ಸಂಘದ ಅಧ್ಯಕ್ಷ್ಯರಾದ ಕುಯಿಲಾಡಿ ಸುರೇಶ್ ನಾಯಕ್ ಜುಲೈ 1 ರಿಂದ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭಿಸಲಾಗುವುದು, ಜಿಲ್ಲಾಡಳಿತ ಆದೇಶದಂತೆ ಶೇಕಡ 50ರಷ್ಟು ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುವುದು, ಇದರ ಜೊತೆ ಬಸ್ ಟಿಕೆಟ್ ದರವನ್ನು ಶೇಕಡ 25 ರಷ್ಟು ಏರಿಕೆ ಮಾಡಲಾಗುವುದು ಎಂದರು.
ಈ ಕುರಿತಂತೆ ಮಾಹಿತಿ ನೀಡಿದ ಉಡುಪಿ ಆರ್ ಟಿಓ ಬಸ್‌ಗಳು 50% ಪ್ರಯಾಣಿಕರನ್ನು ಕೊಂಡೊಯ್ಯಲು ಅನುಮತಿ ಇರುವ ಕಾರಣದಿಂದಾಗಿ ದರ ಹೆಚ್ಚಳದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದೆವೆ. ಇದು ಕೋವಿಡ್ -19 ಸಮಯದ ಅವಧಿಯಲ್ಲಿ ಮಾತ್ರ ಅನ್ವಯವಾಗುತ್ತದೆ. ಬಸ್‌ಗಳಲ್ಲಿ 100% ಪ್ರಯಾಣಿಕರಿಗೆ ಪ್ರಯಾಣ ನಡೆಸಲು ಅನುಮತಿಸಿದ ನಂತರ ದರಗಳು ಕಡಿಮೆಯಾಗುತ್ತವೆ ಎಂದರು