Connect with us

LATEST NEWS

ಶೀರೂರು ಸ್ವಾಮೀಜಿ ನಿಧನ : ಬಿಷಪ್ ಸಂತಾಪ

ಶೀರೂರು ಸ್ವಾಮೀಜಿ ನಿಧನ : ಬಿಷಪ್ ಸಂತಾಪ

ಉಡುಪಿ, ಜುಲೈ 19 : ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳ ನಿಧನಕ್ಕೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಐಸಕ್ ಲೋಬೋ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ದೈವಾಧೀನರಾದರೆಂಬ ಸುದ್ಧಿ ನಮಗೆ ದುಃಖವನ್ನು ತಂದಿದೆ.

ಪರಮ ದೈವಭಕ್ತರಾಗಿದ್ದು, ಜನಪರ ಹೋರಾಟದ ಮುಂಚೂಣಿಯಲ್ಲಿದ್ದ ಶ್ರೀಗಳು ತಮ್ಮ ನಡೆನುಡಿಯಿಂದ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು.

ಬಹುಮುಖ ಪ್ರತಿಭೆಯ ಶ್ರೀಗಳು ಇತರ ಧರ್ಮಗಳ ನಾಯಕರ ಜೊತೆ ಸತ್ಸಂಬಂಧವನ್ನು ಬೆಳೆಸಿದ್ದರು.

ಒಟ್ಟು ಮೂರು ಅವಧಿಯಲ್ಲಿ ಪರ್ಯಾಯ ಪೀಠ ಏರಿ ಬಹಳಷ್ಟು ಜನಹಿತ ಕಾರ್ಯಗಳನ್ನು ಮಾಡಿದ್ದರು.

ಲಕ್ಷ್ಮೀವರತೀರ್ಥ ಶ್ರೀಗಳ ಅಕಾಲಿಕ ಅಗಲುವಿಕೆಯಿಂದ ಎಲ್ಲಾ ಸಹೃದಯಿ ಮಾನವರಿಗೆ ಅತೀವ ದುಃಖವಾಗಿದೆ.

ಉಡುಪಿ ಕ್ರೈಸ್ತ ಧರ್ಮಪ್ರಾಂತದ ಪರವಾಗಿ ಅಗಲಿದ ಶ್ರೀಗಳಿಗೆ ಚಿರಶಾಂತಿಯನ್ನು ಕೋರುತ್ತಾ, ದಯಾಮಯ ಭಗವಂತ ಅವರನ್ನು ತನ್ನ ಸನ್ನಿಧಿಗೆ ಸ್ವಾಗತಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಬಿಷಪ್ ಅವರು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *