LATEST NEWS
ಉಡುಪಿ – ಹಪ್ತಾ ನೀಡುವಂತೆ ಬೆದರಿಕೆಯೊಡ್ಡಿ ಬಾರ್ ಮ್ಯಾನೇಜರ್ ಮೇಲೆ ಹಲ್ಲೆ

ಉಡುಪಿ ಅಕ್ಟೋಬರ್ 22: ಹಪ್ತಾ ನೀಡುವಂತೆ ಬಾರ್ ಮ್ಯಾನೇಜರ್ ಗೆ ಬೆದರಿಕೆಯೊಡ್ಡಿ ಆತನ ಮೇಲೆ ಹಲ್ಲೆ ನಡೆಸಿದ ಘಟನೆ ಉಡುಪಿಯ ಶಿರೂರು ಎಂಬಲ್ಲಿ ನಡೆದಿದೆ.
ಇಲ್ಲಿನ ನೀರ್ಗದ್ದೆಯ ಸಿಲ್ವರ್ ಅರ್ಚ್ ಫ್ಯಾಮಿಲಿ ಬಾರ್ & ರೆಸ್ಟೊರೆಂಟ್ ಗೆ ಬಂದಿದ್ದ ಕಿರಣ್ ಪೂಜಾರಿ ಹಾಗೂ ಅಶೋಕ್ ಎಂಬವರು ಬಾರ್ ಮ್ಯಾನೇಜರ್ ಅಶ್ವೀಜ್ ಶೆಟ್ಟಿ ಬಳಿ ಹಫ್ತಾ ಕೊಡುವಂತೆ ಬೆದರಿಕೆಯೊಡ್ಡಿದ್ದಾರೆ. ಈ ವೇಳೆಯಲ್ಲಿ ಮ್ಯಾನೇಜರ್ ಹಪ್ತಾ ನೀಡಲು ನಿರಾಕರಿಸಿದಾಗ, ಏಕಾಏಕಿ ಬಾಟಲಿಯಿಂದ ಅಶ್ವಿಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಬಂದ ಮಾಲಿಕ ಬಾರ್ ಮಾಲಿಕ, ಅಣ್ಣಪ್ಪ ಶೆಟ್ಟಿ , ರವಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹಾಗೂ ಅಕ್ಷಯ ಆಚಾರ್ಯ ಅವರೊಂದಿಗೆ ಜಗಳಕ್ಕಿಳಿದು, ತಲವಾರು ಬೀಸಿದ ಪರಿಣಾಮ ರವಿ ಶೆಟ್ಟಿ ಪ್ರಶಾಂತ್ ಶೆಟ್ಟಿಯವರಿಗೂ ಗಾಯಗಳಾಗಿವೆ. ಘಟನೆ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
