Connect with us

    LATEST NEWS

    ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಉಡುಪಿಯಲ್ಲಿ ಮತ್ತೆ 7 ಗ್ರಾಮಪಂಚಾಯತ್ ಸೀಲ್ ಡೌನ್

    ಉಡುಪಿ ಜೂನ್ 4: ಉಡುಪಿಯಲ್ಲಿ ಕೊರೊನಾ ಪ್ರಕರಣಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ 50ಕ್ಕೂ ಅಧಿಕ ಕೊರೊನಾ ಪ್ರಕರಣಗಳಿಂದ ಗ್ರಾಮಗಳನ್ನು ಸೀಲ್ ಮಾಡುತ್ತಿದ್ದ, ಇದಾಗಲೇ 33 ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಇನ್ನು ಮತ್ತೆ 7 ಗ್ರಾಮಗಳನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.


    ಮೇ 31 ರಿಂದ ಇಂದಿನವರೆಗೆ 50ಕ್ಕಿಂತ ಅಧಿಕ ಕೊರೋನಾ ಪಾಸಿಟಿವ್ ಬಂದ ಹಿನ್ನಲೆ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 3, ಕುಂದಾಪುರ ತಾಲೂಕಿನ 3 ಮತ್ತು ಕಾರ್ಕಳ ತಾಲೂಕಿನ ಒಂದು ಗ್ರಾಮ ಪಂಚಾಯತ್ ಗಳನ್ನು ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಆದೇಶಿಸಿದೆ. ಬ್ರಹ್ಮಾವರ ತಾಲೂಕಿನ ಅವರ್ಸೆ, ಹನೆಹಳ್ಳಿ, ಕೊಕ್ಕರ್ಣೆ ಗ್ರಾಮ ಪಂಚಾಯತ್, ಕುಂದಾಪುರ ತಾಲೂಕು ವ್ಯಾಪ್ತಿಯ ತಲ್ಲೂರು, ಯಡಮೊಗೆ, ಕರ್ಕುಂಜೆ – ಗ್ರಾಮಪಂಚಾಯತ್, ಕಾರ್ಕಳ ತಾಲೂಕಿನ ಕಲ್ಯ ಗ್ರಾಮ ಪಂಚಾಯತ್ ಇಂದಿನಿಂದ ಸಂಪೂರ್ಣ ಲಾಕ್ ಡೌನ್ ಆಗಿದೆ.

    ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಪರಿಣಾಮಕಾರಿಯಾಗಿ ತಡೆಗಟ್ಟಲು ಸಂಪೂರ್ಣ ಲಾಕ್ ಡೌನ್ ಅಸ್ತ್ರವನ್ನು ಉಡುಪಿ ಜಿಲ್ಲಾಡಳಿತ ಕೈಗೊಂಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *