Connect with us

LATEST NEWS

ರಿವರ್ಸ್ ತೆಗೆಯುವಾಗ ಬಾವಿಗೆ ಬಿದ್ದ ಕಾರು…ಬಾವಿಗೆ ಬೀಳುತ್ತಿದ್ದಂತೆ ಕೆಳಗೆ ಹಾರಿ ಅಪಾಯದಿಂದ ಪಾರಾದ ಚಾಲಕಿ

ಉಡುಪಿ ಜೂನ್ 04: ರಿವರ್ಸ್ ತೆಗೆಯುವಾಗ ಆದ ಅಚಾತುರ್ಯದಿಂದ ಕಾರು ಬಾವಿಗೆ ಬಿದ್ದಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ.


ಖ್ಯಾತ ಶ್ರೀಕೃಷ್ಣ ಪಂಚಾಂಗ ಕರ್ತೃ ಶ್ರೀನಿವಾಸ ಅಡಿಗರ ಅಡಿಗರ ಸೊಸೆ ಕಾರನ್ನು ರಿವರ್ಸ್ ತೆಗೆಯುವಾಗಿ ಬ್ರೇಕ್ ಬದಲಿಗೆ ಎಕ್ಸಲೇಟರ್ ಒತ್ತಿದ ಹಿನ್ನಲೆ ಒಮ್ಮೆಲೆ ಕಾರು ಹಿಮ್ಮುಖವಾಗಿ ಚಲಿಸಿದ್ದು, ನೇರವಾಗಿ ಮನೆಯ ಬಾವಿಗೆ ಬಿದ್ದಿದೆ. ಕಾರು ಬಾವಿಗೆ ಬೀಳುತ್ತಿದ್ದಂತೆ ಶ್ರೀನಿವಾಸ ಅಡಿಗರ ಸೊಸೆ ಕಾರಿನಿಂದ ಕೆಳಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ.


ರಾತ್ರಿ ವೇಳೆ ಸ್ಥಳೀಯರ ಮತ್ತು ಕ್ರೇನ್ ಸಹಾಯಿಂದ ಬಾವಿಯಿಂದ ಕಾರನ್ನು ಮೇಲಕ್ಕೆ ಎತ್ತಲಾಗಿದೆ.