LATEST NEWS
ಉಡುಪಿ ಬಸ್ ನಿಲ್ದಾಣ ಸಮೀಪ ಆಟವಾಡುತ್ತಿದ್ದ ಇಬ್ಬರು ಬಾಲಕರು ನಾಪತ್ತೆ

ಉಡುಪಿ ಡಿಸೆಂಬರ್ 8: ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪ ಆಟವಾಡುತ್ತಿದ್ದ ಇಬ್ಬರು ಬಾಲಕರು ಡಿಸೆಂಬರ್ 3 ರಂದು ನಾಪತ್ತೆಯಾಗಿದ್ದು, ಬಾಲಕರು ಅಪಹರಣಕ್ಕೆ ಒಳಗಾಗಿರುವ ಸಾಧ್ಯತೆ ಹಿನ್ನಲೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಬಾಲಕರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆಯ ನಿವಾಸಿ ನಾಗರಾಜ ಎಂಬವರ ಮಗ ಸಂತೋಷ (11) ಮತ್ತು ನಾಗರಾಜ ಅವರ ಪತ್ನಿಯ ತಂಗಿ ಮಂಗಳ ಎಂಬವರ ಪುತ್ರ ವಿಷ್ಣು (9) ಎಂದು ಗುರುತಿಸಲಾಗಿದೆ.

ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಆಟವಾಡುತ್ತಿದ್ದ ಸಂತೋಷ್ ಹಾಗೂ ವಿಷ್ಣು ನಾಪತ್ತೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಈ ಇಬ್ಬರು ಬಾಲಕರನ್ನು ದುಷ್ಕರ್ಮಿಗಳು ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದು ಅಥವಾ ಅಪಹರಣಕ್ಕೆ ಒಳಾಗಿರಬಹುದು ಎಂದು ಶಂಕಿಸಲಾಗಿದೆ. ನಾಜರಾಜ ಅವರು ಡಿ. 7ರಂದು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.