Connect with us

    UDUPI

    ಉಡುಪಿ ಜಿಲ್ಲೆ 173 ಕೊರೊನಾ ಪ್ರಕರಣ ; 2 ಸಾವು

    ಉಡುಪಿ ಅಗಸ್ಟ್ 5: ದಕ್ಷಿಣಕನ್ನಡ ಜಿಲ್ಲೆಯ ಬಳಿಕ ಉಡುಪಿ ಜಿಲ್ಲೆಯಲ್ಲೂ ಕೊರೊನಾ ಪ್ರಕರಣಗಳಲ್ಲಿ ಯಾವುದೇ ಇಳಿಕೆ ಕಂಡು ಬರುತ್ತಿಲ್ಲ. ಇಂದು ಜಿಲ್ಲೆಯಲ್ಲಿ ಬರೋಬ್ಬರಿ 173 ಮಂದಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 5141 ಕ್ಕೆ ಏರಿಕೆಯಾಗಿದೆ.


    ಉಡುಪಿ ಜಿಲ್ಲೆಯಲ್ಲಿ ಒಟ್ಟು 3072 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2027 ಸಕ್ರಿಯ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಉಡುಪಿಯಲ್ಲಿ ಇಬ್ಬರು ಕೊರೊನೊದಿಂದಾಗಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 44 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ದಾಖಲಾದ ಪ್ರಕರಣಗಳಲ್ಲಿ ಉಡುಪಿ – 76, ಕುಂದಾಪುರ – 57 , ಕಾರ್ಕಳ – 39, ಜಿಲ್ಲೆಯ ಹೊರಗಿನ – 1 .

    Share Information
    Advertisement
    Click to comment

    Leave a Reply

    Your email address will not be published. Required fields are marked *