Connect with us

    LATEST NEWS

    ಸಮುದ್ರಕ್ಕೆ ಹಾರಿದ ಪೋಕ್ಸೋ ಆರೋಪಿ ಶವ ಪತ್ತೆ

    ಉಡುಪಿ ಅಗಸ್ಟ್ 5: ಶೌಚಾಲಯದಲ್ಲಿ ಅಪ್ರಾಪ್ತೆಯ ವಿಡಿಯೋ ಮಾಡಿದ್ದ ಆರೋಪಿ ಶವ ಉಡುಪಿಯ ಕೋಟ ಮಣೂರು ಪಡುಕರೆಯ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದೆ.
    ಮೃತ ಆರೋಪಿಯನ್ನು ಕೂಡ್ಲು ಕಾಳ್ಯಾಂಗಾಡ್ ನಿವಾಸಿ ಮಹೇಶ್ ( 28) ಎಂದು ಗುರುತಿಸಲಾಗಿದೆ.


    ಜುಲೈ 22 ರಂದು ಬೆಳಿಗ್ಗೆ ಕಾಸರಗೋಡು ಬಂದರು ಬಳಿ ಕೂಡ್ಲು ಕಾಳ್ಯಾಂಗಾಡ್ ನ ಮಹೇಶ್ (28) ಪೊಲೀಸರ ಕಣ್ಮುಂದೆಯೇ ಸಮುದ್ರಕ್ಕೆ ಹಾರಿದ್ದನು. ಶೌಚಾಲಯದಲ್ಲಿ ಬಾಲಕಿಯ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಮೊಬೈಲ್‌ನ್ನು ಕಾಸರಗೋಡು ಬಂದರು ಬಳಿ ಕಲ್ಲಿ ನೆಡೆಯಲ್ಲಿ ಇಟ್ಟಿರುವುದಾಗಿ ನೀಡಿದ ಮಾಹಿತಿಯಂತೆ ಮೊಬೈಲನ್ನು ವಶಕ್ಕೆ ತೆಗೆದುಕೊಳ್ಳಲು ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಈತ ಸಮುದ್ರಕ್ಕೆ ಹಾರಿದ್ದನು.

    ಕೂಡಲೇ ಪೊಲೀಸರು ಸಾಕಷ್ಟು ಹುಡುಕಾಡಿದ್ದರು ಕೂಡ ಆರೋಪಿಯ ಪತ್ತೆಯಿರಲಿಲ್ಲ. ಈ ಹಿನ್ನಲೆ ನಾಪತ್ತೆಯಾಗಿರುವ ಆರೋಪಿಯ ಪತ್ತೆಗಾಗಿ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಪೊಲೀಸ್ ರಿಗೆ ಮಾಹಿತಿ ನೀಡಲಾಗಿತ್ತು. ಇಂದು ಉಡುಪಿಯ ಕೋಟ ಮಣೂರು ಪಡುಕರೆಯ ಸಮುದ್ರ ತೀರದಲ್ಲಿ ಆರೋಪಿಯ ಶವ ಡಿಕಂಪೋಸ್ ಆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವದಲ್ಲಿದ್ದ ಬಟ್ಟೆ ಮತ್ತು ಕೈಕೋಳ ಗಮನಿಸಿ ಶವ ಚಹರ ಪತ್ತೆ ಹಚ್ಚಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply