UDUPI
ಉಡುಪಿ: ಜ್ವರ ಉಸಿರಾಟದ ತೊಂದರೆಯಿಂದ 10 ತಿಂಗಳ ಮಗು ಸಾವು….!!
ಉಡುಪಿ ಜುಲೈ 2: ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಹತ್ತು ತಿಂಗಳ ಮಗು ಸಾವನಪ್ಪಿರುವ ಘಟನೆ ಕಾರ್ಕಳದ ಮಿಯಾರು ಎಂಬಲ್ಲಿ ನಡೆದಿದ್ದು, ಮಗುವಿನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.
ಮೂಲತಃ ಬಿಜಾಪುರ ಜಿಲ್ಲೆಯವರಾದ ದಂಪತಿಯ ಲಾಕ್ ಡೌನ್ ಸಂದರ್ಭ ಏಪ್ರಿಲ್ ತಿಂಗಳಲ್ಲಿ ಊರಿಗೆ ತೆರಳಿದ್ದು, ಹತ್ತು ದಿನಗಳ ಹಿಂದೆಯಷ್ಟೇ ಕಾರ್ಕಳಕ್ಕೆ ಆಗಮಿಸಿದ್ದರು. ಜೂನ್ 28 ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನಲೆ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಮಗುವನ್ನು ತಾಲೂಕು ಆಸ್ಪತ್ರೆಗೆ ಕರೆ ತರುವಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಮಗುವಿನ ಗಂಟಲ ದ್ರವವನ್ನು ಪರೀಕ್ಷೆಗಾಗಿ ರವಾನಿಸಲಾಗಿದ್ದು, ವರದಿಗಾಗಿ ಇನ್ನಷ್ಟೆ ಬರಬೇಕಿದೆ.
You must be logged in to post a comment Login