LATEST NEWS
ಉದ್ಯಾವರ – ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳು ಅರೆಸ್ಟ್

ಉಡುಪಿ ಫೆಬ್ರವರಿ 27: ಇತ್ತೀಚೆಗೆ ಉದ್ಯಾವರದಲ್ಲಿರುವ ಎಟಿಎಂಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮಂಗಳೂರು ಮಂಜನಾಡಿ ಸಮೀಪದ ಅಸೈಗೋಳಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ (24) ಹಾಗೂ ಮಂಗಳೂರು ಕಣ್ಣೂರು ಪಡೀಲ್ ನಿವಾಸಿ ಯಾಸೀನ್(21) ಎಂದು ಗುರುತಿಸಲಾಗಿದೆ.
ಆರೋಪಿಗಳು ಫೆಬ್ರವರಿ 12ರಂದು ಬೆಳಗಿನ ಜಾವ ಉದ್ಯಾವರ ಕೆನರಾ ಬ್ಯಾಂಕ್ ATM ಪ್ರವೇಶಿಸಿ ATM ನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಮಂಗಳೂರಿನ ಬಂದರನಲ್ಲಿ ಫೆಬ್ರವರಿ 26ರಂದು ಬೆಳಗ್ಗೆ ಬಂಧಿಸಿದ್ದಾರೆ.
