LATEST NEWS
ಬಿಆರ್ ಶೆಟ್ಟಿ 14 ಸಾವಿರ ಕೋಟಿ ಬೆಲೆ ಬಾಳುವ ಕಂಪೆನಿ ಮಾರಾಟವಾಗಿದ್ದು ಕೇವಲ 1 ಡಾಲರ್ ಗೆ…!!
ದುಬೈ : ದೇಶದ ಪ್ರತಿಷ್ಠಿತ ಎನ್ ಆರ್ ಐ ಉದ್ಯಮಿ ಬಿ.ಆರ್. ಶೆಟ್ಟಿ ಒಡೆತನದ ಪಾವತಿ ಸೇವಾ ಕಂಪನಿ ‘ಫೈನಾಬ್ಲರ್’ಅನ್ನು ಇಸ್ರೇಲ್-ಯುಎಇ ಮೂಲಕದ ಒಕ್ಕೂಟವೊಂದಕ್ಕೆ ಕೇವಲ ಒಂದು ಅಮೆರಿಕನ್ ಡಾಲರ್ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬರೋಬ್ಬರಿ 14 ಸಾವಿರ ಕೋಟಿ ಬೆಲೆಬಾಳುವ ಕಂಪೆನಿ ಇದಾಗಿದ್ದು, ಇದನ್ನು ಕೇವಲ 1 ಡಾಲರ್ ಗೆ ಮಾರಾಟ ಮಾಡಲಾಗುತ್ತಿದೆ.
ಬಿ.ಆರ್ ಶೆಟ್ಟಿ ಓಡೆತನ ಫೈನಾಬ್ಲರ್ ಕಂಪನಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿದೆ. ಕಳೆದ ಡಿಸೆಂಬರ್ ಸಂದರ್ಭ ಸುಮಾರು 2 ಬಿಲಿಯನ್ ಡಾಲರ್ ಕಂಪನಿಯಾಗಿದ್ದ ಫೈನಾಬ್ಲರ್ ಸುಮಾರು 1 ಬಿಲಿಯನ್ ಡಾಲರ್ ಸಾಲ ಹೊಂದಿತ್ತು ಎಂದು ಹೇಳಲಾಗಿತ್ತು.
ಪ್ರಿಸಂ ಸಮೂಹದ ‘ಗ್ಲೋಬಲ್ ಫಿನ್‍ಟೆಕ್ ಇನ್ವೆಸ್ಟ್‍ಮೆಂಟ್ಸ್ ಹೋಲ್ಡಿಂಗ್’ ಕಂಪನಿಯು ಅಬುಧಾಬಿಯ ರಾಯಲ್ ಸ್ಟ್ರಾಟಜಿಕ್ ಪಾರ್ಟ್ನರ್ಸ್ ಜೊತೆ ಒಂದಾಗಿ ಫೈನಾಬ್ಲರ್ ಕಂಪನಿಯನ್ನು ಖರೀದಿ ಮಾಡುವ ಸಾಧ್ಯತೆ ಇದೆ.
ಜಿಎಫ್‍ಐಎಚ್ ಕಂಪನಿಯು ಫೈನಾಬ್ಲರ್ ಕಂಪನಿಗೆ ಬಂಡವಾಳವನ್ನು ಒದಗಿಸಲಿದೆ. ಈ ಬಂಡವಾಳದ ಸಹಾಯದಿಂದ ಫೈನಾಬ್ಲರ್ ಕಂಪನಿ ತನ್ನ ದೈನಂದಿನ ವಹಿವಾಟುಗಳನ್ನು ನಡೆಸಬಹುದು, ಸಾಲ ಮರುಪಾವತಿ ಮಾಡಬಹುದಾಗಿದೆ.