Connect with us

LATEST NEWS

ಕೊಕ್ರಾಣಿ ಶಾಂಭವಿ ನದಿಯಲ್ಲಿ ಮೀನಿನ ಬಲೆಗೆ ಸಿಲುಕಿ ವ್ಯಕ್ತಿ ಸಾವು

ಉಡುಪಿ ಡಿಸೆಂಬರ್ 19: ಶಾಂಭವಿ ನದಿಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆ ತೆಗೆಯಲು ಹೋಗಿ ವ್ಯಕ್ತಿಯೊಬ್ಬರು ಆ ಬಲೆಯಲ್ಲಿಯೇ ಸಿಕ್ಕಿ ಧಾರುಣವಾಗಿ ಮೃತಪಟ್ಟಿರುವ ಘಟನೆ ಮುಲ್ಕಿ ಸಮೀಪದ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಕ್ರಾಣಿ ಎಂಬಲ್ಲಿ ನಡೆದಿದೆ.


ಮೃತರನ್ನು ಮುಲ್ಕಿ ಬಳಿಯ ಕಕ್ವ ನಿವಾಸಿ ವಿಜಯ್ ಫುರ್ಟಾಡೋ(47) ಎಂದು ಗುರುತಿಸಲಾಗಿದೆ. ಶುಕ್ರವಾರ ಶಾಂಭವಿ ನದಿ ತೀರದ ನೆಹರು ಸೇತುವೆ ಬಳಿ ಮೀನು ಹಿಡಿಯಲು ಬಲೆ ಹಾಕಿದ್ದು, ರಾತ್ರಿ 10ರ ಸುಮಾರಿಗೆ ಪರಿಶೀಲಿಸಲು ತೆರಳಿದಾಗ ಬಲೆಯೊಳಗೆ ಸಿಲುಕಿಕೊಂಡು ಮೇಲೆ ಬರಲಾಗದೆ ಮೃತಪಟ್ಟಿದ್ದಾರೆ.

ನದಿ ತೀರಕ್ಕೆ ತೆರಳಿದ ವಿಜಯ್ ಮನೆ ಕಡೆ ಬಾರದ್ದನ್ನು ಕಂಡು ತಾಯಿ ಆತಂಕಗೊಂಡು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಕಾರ್ನಾಡು ಆಪತ್ಪಾಂಧವ ಆಸೀಫ್ ಅವರ ನೆರವಿನಿಂದ ರಾತ್ರೋರಾತ್ರಿ ಶವವನ್ನು ಮೇಲೆತ್ತಿದ್ದಾರೆ.
ಮೃತ ವಿಜಯ್ ಅವರು ದುಬೈನ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದು ನೆಲೆಸಿ ಮೀನುಗಾರಿಕೆ ಉದ್ಯಮ ನಡೆಸುತ್ತಿದ್ದರು. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Facebook Comments

comments