Connect with us

    LATEST NEWS

    ಟಯರ್ ಬ್ಲಾಸ್ಟ್ – ಕಾಪು ಪ್ಲೈಓವರ್ ನಲ್ಲಿ ಪಲ್ಟಿಯಾದ ಟೆಂಪೋ….!!

    ಕಾಪು ಜನವರಿ 12: ಅಡಿಕೆ ಸಾಗಿಸುತ್ತಿದ್ದ ಟೆಂಪೋದ ಟಯರ್ ಸಿಡಿದ ಕಾರಣ ಪಲ್ಟಿಯಾದ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿ 66ರ ಪ್ಲೈ ಓವರ್ ನಲ್ಲಿ ನಡೆದಿದೆ.


    ಈ ಅಪಘಾತದಿಂದ ಟೆಂಪೋದಲ್ಲಿದ್ದ ಚಾಲಕ ಹಾಗೂ ನಿರ್ವಾಹಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಸಿದ್ದಾಪುರದಿಂದ ಮಂಗಳೂರಿಗೆ ಅಡಿಕೆ ಸಾಗಾಟ ಮಾಡುತ್ತಿದ್ದ ಟೆಂಪೋವಿನ ಟಯರ್ ಮಾರ್ಗ ಮಧ್ಯೆ ಒಡೆಯಿತೆನ್ನಲಾಗಿದೆ. ಇದರ ಪರಿಣಾಮವ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಫ್ಲೈ ಒವರ್ ನಲ್ಲಿಪಲ್ಟಿಯಾಗಿ ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಇದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply