LATEST NEWS
ಸನ್ನಿಧಾನಕ್ಕೆ 1 ಕಿಲೋ ಮೀಟರ್ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ತಡೆದ ಅಯ್ಯಪ್ಪ ಭಕ್ತರು
ಸನ್ನಿಧಾನಕ್ಕೆ 1 ಕಿಲೋ ಮೀಟರ್ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ತಡೆದ ಅಯ್ಯಪ್ಪ ಭಕ್ತರು
ಕೇರಳ ಡಿಸೆಂಬರ್ 24: ಇಂದು ಮತ್ತೆ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದ 50 ವರ್ಷದೊಳಗಿನ ಇಬ್ಬರು ಮಹಿಳೆಯರನ್ನು ಸನ್ನಿದಾನದ 1 ಕಿಲೋಮೀಟರ್ ಅಂತರದಲ್ಲಿ ಪ್ರತಿಭಟನಾಕಾರರು ತಡೆದಿದ್ದು, ಪ್ರತಿಭಟನೆಗೆ ಹೆದರಿದ ಪೊಲೀಸರು ಇಬ್ಬರು ಮಹಿಳೆಯರನ್ನು ವಾಪಾಸ್ ಪಂಪೆಗೆ ಕರೆದುಕೊಂಡು ಹೋಗಿದ್ದಾರೆ.
ನಿನ್ನೆ 50 ವರ್ಷದ ಒಳಗಿನ 11 ಮಹಿಳೆಯರನ್ನು ಶಬರಿಮಲೆ ತೆರಳು ಪ್ರಯತ್ನಿಸಿದ್ದರು. ಆದರೆ ಅವರನ್ನು ಅಯ್ಯಪ್ಪ ಭಕ್ತರು ತಡೆದ ಪಂಪೆಯಲ್ಲೆ ತಡೆದಿದ್ದರು. ಇದರ ಬೆನ್ನಲ್ಲೇ ಇಂದು ಕೂಡ ಇಬ್ಬರು ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಮುಂದಾಗಿದ್ದು, ದೇಗುಲಕ್ಕೆ ಒಂದು ಕಿಮೀ ಅಂತರದಲ್ಲಿ ಅವರನ್ನು ಪ್ರತಿಭಟನಾಕಾರರು ತಡೆದಿದ್ದಾರೆ.
ಮಲ್ಲಪುರಂನ 46 ವರ್ಷದ ಕನಕದುರ್ಗ ಹಾಗೂ ಕಾಜಿಕೋಡ್ನ ಬಿಂದು ಶಬರಿಮಲೆ ಬೆಟ್ಟ ಹತ್ತಲು ಮುಂದಾದವರು. ಕೆಎಸ್ಆರ್ಟಿಸಿ ಬಸ್ ಮೂಲಕ ಪಂಪಾ ನದಿ ತೀರಕ್ಕೆ ಬಂದ ಇವರು, ಬೆಟ್ಟ ಹತ್ತಲು ಮುಂದಾಗಿದ್ದರು. ಇಂದು ಬೆಳಗ್ಗೆ 7.30ರ ಸುಮಾರಿಗೆ ಅವರು ಮರಕೊಟ್ಟಂ ಪ್ರದೇಶ ತಲುಪಿದರು. ಇನ್ನು ಸ್ಥಳದಲ್ಲಿರುವ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮುಂದಾಗಿದ್ದಾರೆ.
ಇತ್ತೀಚಿನ ಮಾಹಿತಿ ಬಂದಾಗ ಇಬ್ಬರು ಮಹಿಳೆಯರನ್ನು ಕಾನೂನು ಸುವ್ಯವಸ್ಥೆ ಕಾರಣ ಒಡ್ಡಿ ಪೊಲೀಸರು ವಾಪಾಸ್ ಪಂಪೆ ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.
100ಕ್ಕೂ ಹೆಚ್ಚು ಪ್ರತಿಭಟನಾಕಾರರು ಮಹಿಳೆಯರ ಮಾರ್ಗಕ್ಕೆ ತಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಪ್ರತಿಭಟನಾಕಾರರ ಗುಂಪು ಚದುರಿಸಲು ಸ್ಥಳದಲ್ಲಿ ಅಧಿಕ ಸಂಖ್ಯೆಯ ಪೊಲೀಸರ ನಿಯೋಜನೆ ಮಾಡಲಾಗಿದೆ.
ಈ ವೇಳೆ ಅಯ್ಯಪ್ಪ ಭಕ್ತರು ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಇನ್ನು ಮಹಿಳೆಯರು ಕೂಡ ತಾವು ದರ್ಶನ ಪಡೆಯದೆ ಮರಳುವ ಮಾತು ಇಲ್ಲ ಎಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ಶಬರಿಮಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಅಯ್ಯಪ್ಪ ಭಕ್ತರು ದೇವಸ್ಥಾನದ 1 ಕಿಲೋ ಮೀಟರ್ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ತಡೆದಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪ್ರತಿಭಟನೆಯ ಕಾವು ಜೋರಾಗಿದೆ. ಕೊನೆಗೂ ಪೊಲೀಸರು ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗುವ ಕಾರಣದಿಂದ ಇಬ್ಬರು ಮಹಿಳೆಯರು ವಾಪಾಸ್ ಪಂಪೆಗೆ ಕರೆ ತರುತ್ತಿದ್ದಾರೆ.