UDUPI
ಕುಲದೇವರ ದರ್ಶನ ಪಡೆದ ರಿಯಲ್ ಸ್ಟಾರ್ ಉಪೇಂದ್ರ
ಕುಲದೇವರ ದರ್ಶನ ಪಡೆದ ರಿಯಲ್ ಸ್ಟಾರ್ ಉಪೇಂದ್ರ
ಉಡುಪಿ ಡಿಸೆಂಬರ್ 23 ರಿಯಲ್ ಸ್ಟಾರ್ ಉಪೇಂದ್ರ ತವರಿನ ಪ್ರವಾಸ ನಡೆಸಿ ತೆರಳಿದ್ದಾರೆ. ಕುಟುಂಬ ಸಮೇತರಾಗಿ ಉಡುಪಿ ಜಿಲ್ಲೆ ಕುಂದಾಪುರಕ್ಕೆ ಬಂದಿದ್ದ ಉಪೇಂದ್ರ ಈ ಭಾಗದ ದೇವಾಲಯಗಳನ್ನು ಸಂದರ್ಶಿಸಿದರು.
ಅದರಲ್ಲೂ ಕುಲ ದೇವಸ್ಥಾನವಾದ ಸಾಲಿಗ್ರಾಮ ದ ಗುರು ನರಸಿಂಹ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಪ್ರಿಯಾಂಕ ಉಪೇಂದ್ರಗೆ ಸಾಥ್ ನೀಡಿದ್ರು. ಪುತ್ರ ಮತ್ತು ತಾಯಿಯೂ ಜೊತೆಗಿದ್ದರು.
ಶ್ರೀ ಗುರುನರಸಿಂಹ ದೇವರು ಉಪೇಂದ್ರ ಕುಟುಂಬದ ಕುಲದೇವರು ಅನ್ನೋದು ವಿಶೇಷ. ಜೊತೆಗೆ ಪುತ್ರನ ಉಪನಯನ ಸಿದ್ದತೆಯಲ್ಲಿರುವ ಉಪೇಂದ್ರ ಕುಲದೇವರಿಗೆ ಪೂಜೆ ಸಲ್ಲಿಸಿ ತೆರಳಿದ್ದಾರೆ ಎನ್ನಲಾಗುತ್ತಿದೆ.ಶನಿವಾರ ಉತ್ತರ ಕನ್ನಡ ಜಿಲ್ಲೆಯ ಸೋಂದ ಕ್ಷೇತ್ರದಲ್ಲಿ ರುವ ಮಠದಲ್ಲೂ ಉಪನಯನದ ಆಮಂತ್ರಣ ಇರಿಸಿ ಪೂಜೆ ಸಲ್ಲಿಸಿದ್ದರು. ಇದೇ ವೇಳೆ ತವರು ಗ್ರಾಮ ತೆಕ್ಕಟ್ಟೆಯಲ್ಲಿ ನಡೆದ ಪ್ರಜಾಕೀಯ ಪಕ್ಷ ದ ಕಾರ್ಯಕ್ರಮ ದಲ್ಲೂ ಭಾಗಿಯಾದರು.
You must be logged in to post a comment Login